ಕೊಜಿಕ್ಕೊಡೆ: ವಯನಾಡ್ ಎಂಪಿ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ರೈತ ಕಾಯ್ದೆಯ ವಿರುದ್ಧ ಫೈರಿಂಗ್ ಮುಂದುವರಿಸಿದ್ದಾರೆ. ಬುಧವಾರ ವಯನಾಡ್ ಕಾಲ್ಪೆಟ್ಟಾದಲ್ಲಿ ಯುಡಿಎಫ್ ರ್ಯಾಲಿಯಲ್ಲಿ ಅವರು ಮಾತನಾಡಿದರು.
ನೂತನ ರೈತ ಕಾಯ್ದೆಯ ಬಗ್ಗೆ ಇಡೀ ದೇಶದ ರೈತರಿಗೆ ಸರಿಯಾಗಿ ಅರ್ಥವಾದರೆ ಅವರೂ ಪ್ರತಿಭಟನೆಗಿಳಿಯಲಿದ್ದು, ಇಡೀ ದೇಶ ಬೆಂಕಿಯಾಗಲಿದೆ ಎಂದಿದ್ದಾರೆ. ಹೊಸ ಬಿಲ್ ಮಂಡಿ ವ್ಯವಸ್ಥೆಯನ್ನು ನಾಶ ಮಾಡಲಿದೆ. ಹೆಚ್ಚಿನ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಲು ಅನುವು ಮಾಡಿಕೊಡಲಿದೆ. ಖಾಸಗಿ ವ್ಯಕ್ತಿಗಳು, ಏಜೆಂಟರು ಉತ್ಪನ್ನಗಳ ಬೆಲೆ ನಿಗದಿ ಮಾಡಲಿದ್ದಾರೆ ಎಂದಿದ್ದಾರೆ.
ಪಡಿತರ ಚೀಟಿದಾರರಿಗೆ ಮತ್ತೊಂದು ಭರ್ಜರಿ ಸಿಹಿ ಸುದ್ದಿ: ರೇಷನ್ ಜೊತೆಗೆ ಬೆಲ್ಲ ವಿತರಣೆ – ಸಚಿವರ ಮನವಿ
ದೇಶದ ಎರಡು ಮೂರು ಉದ್ಯಮಿಗಳ ಕೈಯ್ಯಲ್ಲಿ ಇಡೀ ದೇಶದ ಕೃಷಿ ವ್ಯವಸ್ಥೆಯನ್ನು ನೀಡಿದಂತಾಗುತ್ತದೆ. 5 ರಿಂದ 10 ಉದ್ಯಮಿಗಳು ಇಡೀ ದೇಶದ ಪ್ರತಿ ರೈತರ ಉತ್ಪನ್ನಗಳನ್ನು ದೋಚಲಿದ್ದಾರೆ ಎಂದು ರಾಹುಲ್ ದೂರಿದ್ದಾರೆ.