
ಸೋಮವಾರದಂದು ಸಿ.ಬಿ.ಎಸ್.ಇ. ಪರೀಕ್ಷೆಯ 12ನೇ ತರಗತಿ ಫಲಿತಾಂಶ ಹೊರಬಿದ್ದಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡುವ ಮೂಲಕ ಉನ್ನತ ವ್ಯಾಸಂಗಕ್ಕೆ ತೆರಳಲು ಸಜ್ಜಾಗಿದ್ದಾರೆ.
ಇದರ ಮಧ್ಯೆ ನೋಯ್ಡಾದ ಅವಳಿ ಸಹೋದರಿಯರು ಮಾಡಿರುವ ಅಪರೂಪದ ಸಾಧನೆಯೊಂದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ನೋಡಲು ಒಂದೇ ರೀತಿ ಇರುವ ಮಾನಸಿ ಹಾಗೂ ಮಾನ್ಯ ಎಂಬ ಈ ಅವಳಿ ಸಹೋದರಿಯರು ಪರೀಕ್ಷೆಯಲ್ಲಿ ಸಮನಾಗಿ ಶೇಕಡಾ 95.8 ಫಲಿತಾಂಶ ಪಡೆದುಕೊಂಡಿದ್ದಾರೆ.
ಅಷ್ಟೇ ಅಲ್ಲ, ಇಂಗ್ಲಿಷ್, ಕಂಪ್ಯೂಟರ್ ಸೈನ್ಸ್ ನಲ್ಲಿ 98 ಹಾಗೂ ಫಿಸಿಕ್ಸ್, ಕೆಮಿಸ್ಟ್ರಿ ಮತ್ತು ಫಿಸಿಕಲ್ ಎಜುಕೇಶನ್ ವಿಷಯದಲ್ಲಿ 95 ಅಂಕಗಳನ್ನು ಈ ಅವಳಿ ಸಹೋದರಿಯರು ಸಮನಾಗಿ ಪಡೆದಿರುವುದು ವಿಶೇಷ.