ನವದೆಹಲಿ: ಕಳೆದ 7 ತಿಂಗಳಿನಿಂದ ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡತೊಡಗಿದ್ದು, ಇದರಿಂದಾಗಿ ಜನ ಕಂಗಾಲಾಗಿ ಹೋಗಿದ್ದಾರೆ.
ಇದೆ ನಡುವೆ ಕ್ಯಾನ್ಸರ್ ಗೆ ಸಂಬಂಧಿಸಿದಂತೆ ಐಸಿಎಂಆರ್ ಬಿಡುಗಡೆ ಮಾಡಿರುವ ವರದಿ ದೇಶದ ಯುವಕರು ಮತ್ತು ಮಹಿಳೆಯರನ್ನು ಬೆಚ್ಚಿಬೀಳಿಸಿದೆ. ಭಾರತದಲ್ಲಿ ಕೊರೋನಾ ನಡುವೆ ಕ್ಯಾನ್ಸರ್ ಕೂಡ ಅತಿವೇಗವಾಗಿ ಹೆಚ್ಚಾಗುತ್ತಿದೆ ಎಂದು ಐಸಿಎಂಆರ್ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಲಾಗಿದೆ. 2025 ರ ವೇಳೆಗೆ ದೇಶದಲ್ಲಿ 16 ಲಕ್ಷಕ್ಕೂ ಅಧಿಕ ಮಂದಿ ಕ್ಯಾನ್ಸರ್ಗೆ ಬಲಿಯಾಗಲಿದ್ದಾರೆ ಎಂದು ಹೇಳಲಾಗಿದೆ.
ದೆಹಲಿ, ಅಹಮದಾಬಾದ್, ಮುಂಬೈ, ಬೆಂಗಳೂರು, ಕೊಲ್ಕತ್ತಾದಂತಹ ಮಹಾನಗರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮತ್ತು ಮಧ್ಯ ವಯಸ್ಸಿನ ಮಹಿಳೆಯರು ಕ್ಯಾನ್ಸರ್ ಗೆ ಬಲಿ ಆಗಬಹುದು ಎಂದು ಹೇಳಲಾಗಿದೆ.
ದೇಶದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದೆ. ಪೂರ್ವ ರಾಜ್ಯಗಳಲ್ಲಿ ಶ್ವಾಸಕೋಶ, ಮೆದುಳು, ಕುತ್ತಿಗೆ ಬಳಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿತ್ತು ತಂಬಾಕು ಸೇವನೆಯ ಸೌದೆ ಒಲೆ ಬಳಕೆ ಕಾರಣ ಎನ್ನಲಾದೆ.
ಮಧ್ಯಪ್ರದೇಶದ ಯುವಕರಲ್ಲಿ ಬಾಯಿ ಕ್ಯಾನ್ಸರ್ ಹೆಚ್ಚಾಗಿದೆ. ಉತ್ತರಪ್ರದೇಶ, ಬಿಹಾರ. ಪಶ್ಚಿಮ ಬಂಗಾಳದಲ್ಲಿ ಪ್ರೋಟೀನ್ ರಹಿತ ಆಹಾರ ಮತ್ತು ಜಲಮಾಲಿನ್ಯದಿಂದ ಪಿತ್ತಕೋಶದ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತಿದೆ. ದಕ್ಷಿಣ ಭಾರತದಲ್ಲಿ ಮಸಾಲೆ ಪದಾರ್ಥಗಳ ಸೇವನೆಯಿಂದ ಉದರ ಸಂಬಂಧಿತ ಕ್ಯಾನ್ಸರ್ ಹೆಚ್ಚಾಗಿದೆ. ಪಂಜಾಬ್ ನಲ್ಲಿ ಕಿಡ್ನಿ, ಮೂತ್ರಕೋಶ, ರಾಜಸ್ಥಾನ ಮತ್ತು ಗುಜರಾತ್ ನಲ್ಲಿ ಕತ್ತು, ತಲೆಯ ಕ್ಯಾನ್ಸರ್ ಪ್ರಮಾಣ ಜಾಸ್ತಿ ಇದೆ. ದೆಹಲಿ ಮತ್ತು ಮುಂಬೈನಲ್ಲಿ ಶ್ವಾಸಕೋಶದ ಕ್ಯಾನ್ಸರ್ ಜಾಸ್ತಿ ಇದೆ.
20 ರಿಂದ 25 ವರ್ಷ ವಯಸ್ಸಿನವರಲ್ಲಿ ಕ್ಯಾನ್ಸರ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಒಟ್ಟು ಕ್ಯಾನ್ಸರ್ ಪ್ರಕರಣಗಳ ಬಗ್ಗೆ ಶೇಕಡ 40 ರಷ್ಟು ಪಾನ್ ಮಸಾಲ, ಗುಟ್ಕಾಗೆ ಸಂಬಂಧಿಸಿದೆ ಎನ್ನಲಾಗಿದೆ. 2025 ರ ವೇಳೆಗೆ ದೇಶದ ಸುಮಾರು 4 ಲಕ್ಷ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು. ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದರೆ ಗುಣಪಡಿಸಬಹುದು. ಇಲ್ಲವಾದರೆ ಅಪಾಯ ಗ್ಯಾರಂಟಿ ಎಂದು ಹೇಳಲಾಗಿದೆ.