ನವದೆಹಲಿ: ಕೊರೊನಾ ಸೋಂಕು ತಡೆಗೆ ಅಭಿವೃದ್ಧಿಪಡಿಸಲಾದ ಕೊವ್ಯಾಕ್ಸಿನ್ ಆಗಸ್ಟ್ 15 ರ ವೇಳೆಗೆ ಬಿಡುಗಡೆ ಮಾಡಲು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ಮುಂದಾಗಿರುವುದು ವಿವಾದ ಮೂಡಿಸಿದೆ.
ತಜ್ಞರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಲಸಿಕೆಯನ್ನು ಆತುರದಲ್ಲಿ ಬಿಡುಗಡೆ ಮಾಡುವ ಮೂಲಕ ಜನರ ಜೀವವನ್ನೇ ಪಣಕ್ಕೆ ಇಡಲು ಹೊರಟಂತಿದೆ ಎಂದು ದೂರಲಾಗಿದೆ ಎಂದು ಹೇಳಿದ್ದಾರೆ.
ಹೀಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ಸ್ಪಷ್ಟನೆ ನೀಡಿದ್ದು, ಜನರಿಗೆ ಆದಷ್ಟು ಬೇಗ ಕೊರೋನಾ ಲಸಿಕೆ ಸಿಗುವಂತೆ ಮಾಡಲು ಜಾಗತಿಕ ನಿಯಮಗಳಿಗೆ ಅನುಗುಣವಾಗಿ ಕ್ಲಿನಿಕಲ್ ಟ್ರಯಲ್ ನಡೆಸಲಾಗುತ್ತಿದೆ. ಜನರ ರಕ್ಷಣೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲವೆಂದು ತಿಳಿಸಲಾಗಿದೆ.
ಜಾಗತಿಕ ಮಾನದಂಡ ಮತ್ತು ನಿಯಮಗಳ ಅನುಸಾರ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ. ಇದರಲ್ಲಿ ಸಣ್ಣ ಲೋಪಕ್ಕೂ ಕೂಡ ಅವಕಾಶ ಇಲ್ಲ ಎಂದು ಹೇಳಲಾಗಿದೆ.