ನವದೆಹಲಿ: ನವೆಂಬರ್ ನಲ್ಲಿ ಕೊರೋನಾ ಸೋಂಕು ತಾರಕಕ್ಕೇರಲಿದ್ದು ಸೋಂಕಿತರ ಸಂಖ್ಯೆ ಹೆಚ್ಚಾಗಲಿದೆ. ಲಾಕ್ ಡೌನ್ ವೇಳೆ ಸೋಂಕು ಶೇಕಡ 97 ರಷ್ಟು ನಿಯಂತ್ರಣಕ್ಕೆ ಬಂದಂತಾಗಿದೆ.
ನವೆಂಬರ್ ನಲ್ಲಿ ವೆಂಟಿಲೇಟರ್ ಕೊರತೆ ಎದುರಾಗಲಿದೆ ಎಂದು ಐಸಿಎಂಆರ್ ಹೇಳಿದೆ. ಕೇಂದ್ರ ಸರ್ಕಾರದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಸಂಶೋಧಕರ ತಂಡವನ್ನು ರಚಿಸಿದ್ದು, ಈ ತಂಡದ ಅಧ್ಯಯನ ವರದಿಯಲ್ಲಿ ಕೊರೋನಾ ಜುಲೈ, ಆಗಸ್ಟ್, ಸೆಪ್ಟೆಂಬರ್ ನಲ್ಲಿ ಜಾಸ್ತಿಯಾಗಿ ನವೆಂಬರ್ ನಲ್ಲಿ ತಾರಕಕ್ಕೇರಲಿದೆ ಎಂದು ಹೇಳಲಾಗಿದೆ.
ಲಾಕ್ಡೌನ್ ಪರಿಣಾಮದಿಂದ ಸೋಂಕು ಹೆಚ್ಚಳ ವಿಳಂಬವಾಗಿದೆ. ಸೋಂಕು ಶೇಕಡ 97 ರಷ್ಟು ನಿಯಂತ್ರಣಕ್ಕೆ ಬಂದಿತ್ತು ಎಂದು ಹೇಳಲಾಗಿದ್ದು, ಲಾಕ್ ಡೌನ್ ನಿಂದಾಗಿ ಆರೋಗ್ಯ ಸೇವೆ, ಸಂಪನ್ಮೂಲ ಮೂಲಸೌಕರ್ಯ ಸಿದ್ಧಪಡಿಸಲು ಕಾಲಾವಕಾಶ ದೊರೆತಂತಾಯಿತು. ಈಗ ಇರುವ ಚಿಕಿತ್ಸಾ ವ್ಯವಸ್ಥೆ ನವೆಂಬರ್ ವರೆಗೆ ಇರುವ ಬೇಡಿಕೆಗೆ ಸಾಕಾಗುತ್ತದೆ ಎಂದು ಹೇಳಲಾಗಿದೆ.