ನವದೆಹಲಿ: 10ನೇ ತರಗತಿ ಬಳಿಕ ಸಿಎ ಅಭ್ಯಾಸಕ್ಕೆ ಅವಕಾಶ ನೀಡಲಾಗುವುದು. ಭಾರತೀಯ ಲೆಕ್ಕಪರಿಶೋಧಕರ ಮಂಡಳಿ ನಡೆಸುವ ಚಾರ್ಟರ್ಡ್ ಅಕೌಂಟೆಂಟ್ ಫೌಂಡೇಶನ್ ಕೋರ್ಸ್ಗೆ ಆಸಕ್ತ 10ನೇ ತರಗತಿ ಪಾಸಾದ ವಿದ್ಯಾರ್ಥಿಗಳು ತಾತ್ಕಾಲಿಕ ಪ್ರವೇಶ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.
ಇದಕ್ಕಾಗಿ ಭಾರತೀಯ ಲೆಕ್ಕಪರಿಶೋಧಕರ ಮಂಡಳಿ ವತಿಯಿಂದ ನಿಯಮ ಬದಲಾವಣೆ ಮಾಡಲಾಗಿದೆ. ತಾತ್ಕಾಲಿಕವಾಗಿ ಪ್ರವೇಶ ಪಡೆದುಕೊಂಡ ವಿದ್ಯಾರ್ಥಿಗಳು 12ನೇ ತರಗತಿ ಪಾಸಾದ ನಂತರ ಅಧಿಕೃತ ಪ್ರವೇಶ ಪಡೆಯಬಹುದು. ಇದರಿಂದಾಗಿ ಆರು ತಿಂಗಳು ಮೊದಲೇ ಕೋರ್ಸ್ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎನ್ನಲಾಗಿದೆ.
ಮಂಡಳಿಯ ಅಧ್ಯಕ್ಷ ಅತುಲ್ ಕುಮಾರ್ ಗುಪ್ತಾ ಈ ಕುರಿತಾಗಿ ಮಾತನಾಡಿ, ಚಾರ್ಟರ್ಡ್ ಅಕೌಂಟೆಂಟ್ಸ್ ರೆಗ್ಯುಲೇಶನ್ ನಿಯಮಗಳಿಗೆ ತಿದ್ದುಪಡಿ ತರಲು ಸರ್ಕಾರ ಅನುಮತಿ ನೀಡಿದೆ ಎಂದು ಹೇಳಿದ್ದಾರೆ.