ಬಿಲಾಸ್ಪುರ: ಪ್ರವಾಹ ನಡುವೆ ಹಲವು ತಾಸಿನಿಂದ ನಿಂತಿದ್ದ ವ್ಯಕ್ತಿಯನ್ನು ಭಾರತೀಯ ವಾಯುಪಡೆಯ ಯೋಧರು ಹೆಲಿಕ್ಯಾಪ್ಟರ್ ಮೂಲಕ ರಕ್ಷಣೆ ಮಾಡಿದ್ದಾರೆ.
ಭಾರಿ ಮಳೆಯ ಕಾರಣದಿಂದ ಛತ್ತೀಸ್ ಗಢ ರಾಜ್ಯದ ಕುಟ್ಟಾಘಾಟ್ ಅಣೆಕಟ್ಟೆಯಿಂದ ನೀರು ಹೊರಬಿಡಲಾಗಿತ್ತು. ವ್ಯಕ್ತಿಯೊಬ್ಬ ಅದರ ನಡುವೆ ಸಿಲುಕಿಕೊಂಡು ಒಂದು ಇಡೀ ರಾತ್ರಿ ಕಳೆದಿದ್ದ. ಜಿಲ್ಲಾಡಳಿತದ ವಿನಂತಿಯ ಮೇರೆಗೆ ವಾಯುಪಡೆ ಯೋಧರು ಎಂಐ-17 ಎಂಬ ಭಾರತೀಯ ವಾಯುಪಡೆಯ ಹೆಲಿಕ್ಯಾಪ್ಟರ್ ನಿಂದ ಹಗ್ಗ ಬಿಟ್ಟು ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಯನ್ನು ಸಾಹಸದಿಂದ ಮೇಲೆಳೆದು ರಕ್ಷಣೆ ಮಾಡಿದ್ದಾರೆ. ಅದರ ವಿಡಿಯೋವನ್ನು ಛತ್ತೀಸ್ ಗಢ ಬಿಲಾಸ್ಪುರ ಪೊಲೀಸರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
“ಅತಿ ಕೆಟ್ಟ ಹವಾಮಾನ ಪರಿಸ್ಥಿತಿಯಲ್ಲಿ ರಕ್ಷಣೆ ಮಾಡಿದ ಭಾರತೀಯ ವಾಯುಪಡೆ, ಬಿಲಾಸ್ಪುರ ಪೊಲೀಸರು, ಎನ್.ಡಿ.ಆರ್.ಎಫ್., ಎನ್.ಟಿ.ಪಿ.ಸಿ., ಎಸ್ಇಸಿಎಲ್ ಹಾಗೂ ಸಹಕಾರ ನೀಡಿದ ಸ್ಥಳೀಯರಿಗೂ ಧನ್ಯವಾದಗಳು ಎಂದು ಟ್ವಿಟರ್ ನಲ್ಲಿ ಬರೆಯಲಾಗಿದೆ.
https://twitter.com/PoliceBilaspur/status/1295183478460280833?ref_src=twsrc%5Etfw%7Ctwcamp%5Etweetembed%7Ctwterm%5E1295183478460280833%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fiaf-rescues-man-stranded-in-heavy-flow-of-flood-water-at-bilaspur-s-khutaghat-dam-watch%2F638127
https://twitter.com/PoliceBilaspur/status/1295172119563603968?ref_src=twsrc%5Etfw%7Ctwcamp%5Etweetembed%7Ctwterm%5E1295172119563603968%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fiaf-rescues-man-stranded-in-heavy-flow-of-flood-water-at-bilaspur-s-khutaghat-dam-watch%2F638127