alex Certify ವಿಷ ಪ್ರಾಶನ ಕುರಿತ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಇಸ್ರೋ ವಿಜ್ಞಾನಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಷ ಪ್ರಾಶನ ಕುರಿತ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಇಸ್ರೋ ವಿಜ್ಞಾನಿ..!

ಇಸ್ರೋದ ಪ್ರಮುಖ ವಿಜ್ಞಾನಿ ತಮಗೆ 2017ರಲ್ಲಿ ವಿಷವುಣಿಸಲಾಗಿತ್ತು ಎಂಬ ಆಘಾತಕಾರಿ ವಿಚಾರವನ್ನ ಬಾಯ್ಬಿಟ್ಟಿದ್ದಾರೆ. ಫೇಸ್​ಬುಕ್​ನಲ್ಲಿ ಈ ಸಂಬಂಧ ಮಾಹಿತಿ ನೀಡಿರುವ ವಿಜ್ಞಾನಿ ತಪನ್​ ಮಿಶ್ರಾ ತಮಗೆ 2017ರ ಮೇ 23ರಂದು ಅರ್ಸೆನಿಕ್​ ಟ್ರೈ ಆಕ್ಸೈಡ್ ​ನ್ನು ಪಿತೂರಿಯಿಂದ ನೀಡಿದ್ದರು ಎಂದು ಆರೋಪಿಸಿದ್ದಾರೆ. ಇಸ್ರೋ ಮುಖ್ಯ ಕಚೇರಿಯಲ್ಲಿ ನಡೆಯುತ್ತಿದ್ದ ಸಂದರ್ಶನದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ನನಗೆ ವಿಷವುಣಿಸಲಾಗಿತ್ತು ಎಂಬ ಸ್ಪೋಟಕ ಮಾಹಿತಿಯನ್ನ ಬಹಿರಂಗಪಡಿಸಿದ್ದಾರೆ.

ಬಹುಶಃ ದೋಸಾ ಹಾಗೂ ಚಟ್ನಿಯ ಜೊತೆ ಈ ವಿಷವನ್ನ ಮಿಶ್ರಣ ಮಾಡಲಾಗಿತ್ತು ಎಂದು ತಪನ್​ ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ತಪನ್​ ಮಿಶ್ರಾ ಇಸ್ರೋದಲ್ಲಿ ಹಿರಿಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಅವರು ಇಸ್ರೋದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು.

ದೀರ್ಘ ಕಾಲದ ರಹಸ್ಯ ಎಂಬ ಶೀರ್ಷಿಕೆಯ ಮೂಲಕ ಫೇಸ್​ಬುಕ್​ನಲ್ಲಿ ಈ ವಿಚಾರವನ್ನ ಮಿಶ್ರಾ ಬಹಿರಂಗಪಡಿಸಿದ್ದಾರೆ. ಗೃಹ ಇಲಾಖೆ ನನ್ನನ್ನ ವೈಯಕ್ತಿಕವಾಗಿ ಭೇಟಿ ಮಾಡಿ ಈ ವಿಚಾರದ ಬಗ್ಗೆ ಮಾಹಿತಿ ನೀಡಿತು. ಈ ಘಟನೆ ಬಳಿಕ ನನ್ನ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾದವು. ಉಸಿರಾಟದ ಸಮಸ್ಯೆ, ಚರ್ಮದ ಸಮಸ್ಯೆ ಹಾಗೂ ಫಂಗಸ್​ ಸೋಂಕಿನಿಂದ ಬಳಲಿದ್ದೇನೆ ಎಂದಿದ್ದಾರೆ. ಇದೊಂದು ಗೂಢಚರ್ಯ ಕಾರ್ಯ ಎಂದು ಮಿಶ್ರಾ ಶಂಕಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...