ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನೆಹರು ಅವರನ್ನು ಜಗತ್ತಿನ ಪ್ರಸಿದ್ದ ವ್ಯಕ್ತಿಗಳಾದ ವಿನ್ ಸ್ಟನ್ ಚರ್ಚಿಲ್ ಮತ್ತು ನೆವಿಲ್ಲೆ ಚೇಂಬರ್ಲಿನ್ ಗೆ ಹೋಲಿಸಿದ ವಿಡಿಯೋವೊಂದು ವೈರಲ್ ಆಗಿದೆ.
ಇತಿಹಾಸಕಾರ ರಾಮಚಂದ್ರ ಗುಹ ಅವರು ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದು, ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ವಾಜಪೇಯಿ ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ತಮ್ಮ ಮತ್ತು ನೆಹರು ನಡುವಿನ ಆತ್ಮೀಯತೆ ಬಗ್ಗೆ ಸಂಸತ್ ನಲ್ಲಿ ಮಾಡಿದ ಭಾಷಣದ ವಿಡಿಯೋ ಅದು.
ನಾನಿನ್ನೂ ಆಗ ಹೊಸಬ. ಸಂಸತ್ ನಲ್ಲಿ ಮಾತಿಗೆ ಅವಕಾಶ ಸಿಗುತ್ತಿದ್ದುದ್ದೇ ಕಡಿಮೆ. ಅದಕ್ಕಾಗಿ ಸಭಾತ್ಯಾಗ ಮಾಡಿದ್ದೂ ಇದೆ. ಒಮ್ಮೆ ಅವಕಾಶ ಸಿಕ್ಕಾಗ ನೆಹರು ಅವರನ್ನು ಕುರಿತೇ ಮಾತನಾಡಿದ್ದೆ. ನಿಮ್ಮೊಳಗೆ ಚರ್ಚಿಲ್ ಕೂಡ ಇದ್ದಾನೆ, ಚಂಬರ್ಲಿನ್ ಸಹ ಇದ್ದಾನೆ ಎಂದು ಟೀಕಿಸಿದ್ದೆ. ಆದರೆ, ನೆಹರು ಕೋಪಿಸಿಕೊಂಡಿರಲಿಲ್ಲ. ಸಂಜೆ ಔತಣ ಕೂಟದಲ್ಲಿ ಸಿಕ್ಕಾಗ ನನ್ನ ಭಾಷಣವನ್ನು ಅವರು ಹೊಗಳಿದ್ದರಲ್ಲದೆ, ಮುಗುಳ್ನಗೆ ಬೀರಿ ಹೊರಟಿದ್ದರು.
ನಾನು ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ಮಂತ್ರಿಯಾಗಿದ್ದಾಗ ಸಚಿವಾಲಯದ ದಕ್ಷಿಣ ಬ್ಲಾಕ್ ನಲ್ಲಿದ್ದ ನೆಹರು ಅವರ ಚಿತ್ರಪಟವನ್ನು ಯಾರೋ ತೆಗೆದಿದ್ದರು. ಇದನ್ನು ಕಂಡ ನಾನು, ಚಿತ್ರಪಟವೆಲ್ಲಿ ? ತೆಗೆದಿದ್ದು ಯಾಕೆ ಎಂದು ಕೋಪದಲ್ಲೇ ಕೇಳಿದ್ದೆ. ಯಾರಿಂದಲೂ ಉತ್ತರ ಬರಲಿಲ್ಲ. ಆದರೆ, ಮರುದಿನವೇ ಚಿತ್ರಪಟ ಆ ಜಾಗಕ್ಕೆ ಬಂದು ಕುಳತಿತ್ತು. ಇದನ್ನು ಹೇಳಿದರೆ, ಕಾಂಗ್ರೆಸಿಗರೂ ನಂಬುವುದಿಲ್ಲ. ಈಗ ಇಂತಹ ಟೀಕೆಗಳನ್ನು ಮಾಡಿದರೆ, ಹಗೆತನ ಕಟ್ಟಿಕೊಳ್ಳಬೇಕಾಗುತ್ತದೆ. ಅಂತಹ ಪರಿಸ್ಥಿತಿ ಇದೆ ಎಂದು ವಾಜಪೇಯಿ ಹೇಳಿದ್ದರು. ಈ ವಿಡಿಯೋ ರಾಮಚಂದ್ರ ಗುಹ ಮಾತ್ರವಲ್ಲದೆ, ಶಶಿ ತರೂರ್ ಸೇರಿ ಹಲವರು ರೀಟ್ವೀಟ್ ಮಾಡಿದ್ದಾರೆ.
https://twitter.com/sanjaymuthal/status/1279654242819678208?ref_src=twsrc%5Etfw%7Ctwcamp%5Etweetembed%7Ctwterm%5E1279654242819678208%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fi-called-nehru-mix-of-churchill-and-chamberlain-vajpayees-old-parliament-speech-goes-viral-2701989.html