ಐಟಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿರುವ ಯುವತಿಯೊಬ್ಬಳು ಬೀದಿ ನಾಯಿಗಳಿಗೆ ತಮ್ಮ ಬಿಡುವಿನ ವೇಳೆಯಲ್ಲಿ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ನಾಯಿಯೆಂದರೆ ಹೆದರುತ್ತಿದ್ದ ಹೈದರಾಬಾದ್ ನಿವಾಸಿ ಶೈಲಜಾ ಮನೆಯಲ್ಲಿ ಬೀದಿ ನಾಯಿಯನ್ನ ಸಾಕೋಕೆ ಆರಂಭಿಸಿದ ಬಳಿಕ ಪ್ರಾಣಿ ಪ್ರೀತಿ ಎಂದರೇನು ಎಂಬುದನ್ನ ಅರಿತುಕೊಂಡಿದ್ದಾರೆ. 2018ರಿಂದ ತಮ್ಮ ಉಳಿತಾಯದ ಹಣದಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಗೂ ಔಷಧಿಗಳನ್ನ ಶೈಲಜಾ ಒದಗಿಸುತ್ತಿದ್ದಾರೆ.
2018ರವರೆಗೂ ನನಗೆ ನಾಯಿಗಳೆಂದರೆ ಭಯ. ಆದರೆ ಯಾವಾಗ ನಮ್ಮ ಮನೆಗೆ ಬೀದಿ ನಾಯಿಯೊಂದು ಅತಿಥಿಯಾಗಿ ಬಂತೋ ಆಗ ನನಗೆ ಪ್ರಾಣಿ ಪ್ರೀತಿಯ ಬಗ್ಗೆ ಅರಿವಾಯಿತು. ಹೀಗಾಗಿ ರಸ್ತೆ ಬದಿಯಲ್ಲಿರುವ ಅದೆಷ್ಟೋ ನಾಯಿಗಳಿಗೆ ಏನಾದರೂ ಸಹಾಯ ಮಾಡಬೇಕೆಂದು ನಿರ್ಧರಿಸಿದೆ. ಎಲ್ಲ ನಾಯಿಗಳನ್ನ ಮನೆಗೆ ತಂದು ಸಾಕೋದು ಕಷ್ಟದ ಕೆಲಸ. ಹೀಗಾಗಿ ನಾನೇ ಬಿಡುವಿದ್ದಾಗ ಹೋಗಿ ಪ್ರಾಣಿಗಳಿಗೆ ಆಹಾರ ಹಾಗೂ ಔಷಧಿ ಒದಗಿಸುತ್ತೇನೆ ಅಂತಾ ಶೈಲಜಾ ಹೇಳಿದ್ದಾರೆ.