alex Certify ಅಳಿಯನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ಅತ್ತೆಯಿಂದಲೇ ಆಘಾತಕಾರಿ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಳಿಯನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ಅತ್ತೆಯಿಂದಲೇ ಆಘಾತಕಾರಿ ಕೃತ್ಯ

ಹೈದರಾಬಾದ್: ಮಗಳ ಗಂಡನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ ಮಹಿಳೆ ಆತನನ್ನು ಕೊಲೆ ಮಾಡಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

2019ರಲ್ಲಿ ಮಹಿಳೆಯ 19 ವರ್ಷದ ಮಗಳೊಂದಿಗೆ 32 ವರ್ಷದ ವ್ಯಕ್ತಿಯ ಮದುವೆಯಾಗಿತ್ತು. ಇದಾದ ನಂತರದಲ್ಲಿ ಮಗಳ ಗಂಡನೊಂದಿಗೆ ಮಹಿಳೆ ಅಕ್ರಮ ಸಂಬಂಧ ಬೆಳೆಸಿದ್ದಾಳೆ. ಈ ವಿಚಾರ ಮಗಳಿಗೆ ಗೊತ್ತಾಗಿ ಬುದ್ಧಿವಾದ ಹೇಳಿದ್ದಾಳೆ.

ಆದರೂ, ತಾಯಿ ಮತ್ತು ಗಂಡ ಸಂಬಂಧ ಮುಂದುವರಿಸಿದ್ದರಿಂದ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದೇ ಪ್ರಕರಣದಲ್ಲಿ ಅಳಿಯ ಜೈಲಿಗೆ ಹೋಗಿ ಕೆಲವು ದಿನಗಳ ಬಳಿಕ ಜಾಮೀನು ಪಡೆದು ಹೊರ ಬಂದಿದ್ದಾನೆ.

ನಂತರದಲ್ಲಿ ಅತ್ತೆಯ ಮನೆಗೆ ಬಂದ ಅಳಿಯ ಅಕ್ರಮ ಸಂಬಂಧ ಮುಂದುವರೆಸಲು ಕಿರುಕುಳ ನೀಡಿದ್ದು ಆಕ್ರೋಶಗೊಂಡ ಮಹಿಳೆ ಅಳಿಯನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ. ಬಳಿಕ ಉಪ್ಪಾಲ್ ಪೊಲೀಸರಿಗೆ ಶರಣಾಗಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...