ಶಾಲೆ ಹಾಗೂ ಆಸ್ಪತ್ರೆ ನಡೆಸುತ್ತಿದ್ದ ಇಬ್ಬರು ಖತರ್ನಾಕ್ ನಕಲಿ ವೈದ್ಯರನ್ನು ಹೈದ್ರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಮೆಹ್ದಿಪಟ್ಟಣಂನ ಆಸಿಫ್ ನಗರ ರಸ್ತೆಯಲ್ಲಿ ಸಮೀರ್ ಹಾಸ್ಪಿಟಲ್ ಎಂಬ ಹೆಸರಿನ ಆಸ್ಪತ್ರೆ ನಡೆಸುತ್ತಿದ್ದ ಮೊಹಮ್ಮದ್ ಶೋಯೆಬ್, ಸುಭಾನಿ ಮೊಹಮ್ಮದ್ ಅಬ್ದುಲ್ ಮುಜೀಬ್ ಬಂಧಿತರು.
ಇವರಿಬ್ಬರು ವೈದ್ಯರಾಗುವ ಯಾವುದೇ ಅರ್ಹತೆಯನ್ನು ಹೊಂದಿಲ್ಲ, ಪ್ರಮಾಣ ಪತ್ರವನ್ನೂ ಹೊಂದಿಲ್ಲ. ಆದರೆ ವೈದ್ಯರಂತೆ ನಟಿಸಿ ಮುಗ್ಧ ಜನರಿಂದ ಸುಲಭವಾಗಿ ಹಣ ಗಳಿಸುತ್ತಿದ್ದರಲ್ಲದೇ, ಜನರ ಪ್ರಾಣವನ್ನು ಅಪಾಯಕ್ಕೆ ತಳ್ಳುತ್ತಿದ್ದರು. ಬಂಧಿತರ ಪೈಕಿ ಒಬ್ಬ ಹತ್ತನೇ ತರಗತಿಯವರೆಗೆ ಓದಿದ್ದರೆ ಮತ್ತೊಬ್ಬ ಡಿಗ್ರಿಯನ್ನು ಅರ್ಧಕ್ಕೆ ಬಿಟ್ಟಿದ್ದ.
2011ರಲ್ಲಿ ಅವರು ಗ್ಲೋಬಲ್ ಟೆಕ್ನೋ ಸ್ಕೂಲ್ ಹೆಸರಿನಲ್ಲಿ ಮೆಹದಿಪಟ್ನಂನಲ್ಲಿ ಶಾಲೆ ಪ್ರಾರಂಭಿಸಿದರು. 2017ರಲ್ಲಿ ಸಮೀರ್ ಹಾಸ್ಪಿಟಲ್ ಹೆಸರಿನಲ್ಲಿ ವ್ಯವಹಾರವನ್ನು ಪ್ರಾರಂಭಿಸಿದ್ದರು.