ನಟ ಸೋನು ಸೂದ್ರ ಮಾನವೀಯ ಕಾರ್ಯಗಳಿಂದ ಸ್ಪೂರ್ತಿ ಪಡೆದ ಹೈದರಾಬಾದ್ನ ಈಜುಗಾರರೊಬ್ಬರು ನೂತನ ಆಂಬುಲೆನ್ಸ್ ಸೇವೆ ಆರಂಭಿಸಿದ್ದು, ಅದಕ್ಕೆ ’ಸೋನು ಸೂದ್ ಆಂಬುಲೆನ್ಸ್ ಸರ್ವೀಸ್,’ ಎಂದು ಹೆಸರಿಟ್ಟಿದ್ದಾರೆ.
ಶಿವ ಎಂಬ ಈ ಈಜುಗಾರ ಮುತ್ತಿನ ನಗರಿಯ ಹುಸೇನ್ಸಾಗರ್ ಕೆರೆಯಲ್ಲಿ ಮುಳುಗಿಹೋಗಲಿದ್ದ ಸುಮಾರು 100ಕ್ಕೂ ಹೆಚ್ಚು ಮಂದಿಯನ್ನು ಇದುವರೆಗೂ ಕಾಪಾಡಿದ್ದಾರೆ. ಶಿವ ಅವರ ಈ ಹೀರೋಯಿಕ್ ಕೈಂಕರ್ಯಗಳಿಂದ ಅವರನ್ನು ’ಟ್ಯಾಂಕ್ ಬಂಡ್ ಶಿವ’ ಎಂದೇ ಜನರು ಪ್ರೀತಿಯಿಂದ ಕರೆಯುತ್ತಾರೆ.
“ನನ್ನ ಕುಟುಂಬವನ್ನು ಸಾಗಿಸಲು ಜನರು ನನಗೆ ಸಾಕಷ್ಟು ದುಡ್ಡನ್ನು ದೇಣಿಗೆ ಕೊಟ್ಟಿದ್ದಾರೆ. ಆದರೆ ನಾನು ಆ ದುಡ್ಡಿನಿಂದ ಆಂಬುಲೆನ್ಸ್ ಖರೀದಿಸಿದ್ದೇನೆ. ಸೋನು ಸೂದ್ ಅವರ ಒಳ್ಳೆಯ ಕಾರ್ಯಗಳಿಂದ ಸ್ಪೂರ್ತಿ ಪಡೆದು ನಾನು ಆಂಬುಲೆನ್ಸ್ಗೆ ಅವರ ಹೆಸರು ಇಟ್ಟಿದ್ದೇನೆ,” ಎಂದು ಶಿವ ಹೇಳುತ್ತಾರೆ.