alex Certify ತೆಲಂಗಾಣದ ವಿದ್ಯಾರ್ಥಿಗಳಿಂದ ತಯಾರಾಯ್ತು ಪರಿಸರ ಸ್ನೇಹಿ ಬಳಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೆಲಂಗಾಣದ ವಿದ್ಯಾರ್ಥಿಗಳಿಂದ ತಯಾರಾಯ್ತು ಪರಿಸರ ಸ್ನೇಹಿ ಬಳಪ

Rice Flour Chalks Hyderabad| Hyderabad: School students create organic  chalk sticks out of rice flour and eucalyptus | Trending & Viral Newsಹೈದರಾಬಾದ್​ನ ಅದಿಲಾಬಾದ್​ ನಗರದ ಶಾಲೆಯ ವಿದ್ಯಾರ್ಥಿಗಳಾದ ಪಿ. ಹರ್ಷಿತ್​ ವರ್ಮಾ ಹಾಗೂ ಕೆ. ರುದ್ರಾ ಆರ್ಗಾನಿಕ್​ ಬಳಪಗಳನ್ನ ಆವಿಷ್ಕಾರ ಮಾಡಿದ್ದಾರೆ.

ಈ ಆರ್ಗಾನಿಕ್​ ಬಳಪಗಳು ಸದ್ಯ ಬಳಕೆಯಲ್ಲಿರುವ ಜಿಪ್ಸಂ ಬಳಪಗಳ ಬದಲಾಗಿ ಬಳಕೆ ಮಾಡಬಹುದಾಗಿದೆ. ಅಕ್ಕಿ ಹಿಟ್ಟು, ನಿಂಬು, ಬೇವು, ಮಣ್ಣು ಹಾಗೂ ಎಣ್ಣೆಯನ್ನ ಬಳಸಿ ಈ ಬಳಪವನ್ನ ಕಂಡು ಹಿಡಿಯಲಾಗಿದೆ.

ಜಿಪ್ಸಂ ಬಳಪಗಳಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರೋ ಹಿನ್ನೆಲೆ ಈ ವಿದ್ಯಾರ್ಥಿಗಳು ಪರಿಸರ ಸ್ನೇಹಿ ಬಳಪಗಳನ್ನ ಆವಿಷ್ಕಾರ ಮಾಡಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿದ ಓರ್ವ ವಿದ್ಯಾರ್ಥಿ, ಶಾಲೆಯಲ್ಲಿ ಶಿಕ್ಷಕರು ಪ್ರಸ್ತುತ ಬಳಕೆ ಮಾಡುತ್ತಿರುವ ಬಳಪಗಳು ರಾಸಾಯನಿಕದಿಂದ ಮಾಡಲ್ಪಟ್ಟಿವೆ. ಈ ಬಳಪಗಳಿಂದ ಕಣ್ಣು ಹಾಗೂ ಶ್ವಾಸಕೋಶದ ಆರೋಗ್ಯಕ್ಕೆ ಧಕ್ಕೆ ಉಂಟಾಗುತ್ತೆ ಎಂದು ಹೇಳಿದ್ದಾನೆ.

ಈ ಬಳಪಗಳು ನೈಸರ್ಗಿಕ ವಸ್ತುಗಳಿಂದ ಬಳಕೆ ಮಾಡಿರೋದ್ರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರೋದಿಲ್ಲ ಅನ್ನೋದು ಒಂದು ಲಾಭವಾದ್ರೆ ಮಲ್ಲಿಗೆ ಹಾಗೂ ಶ್ರೀಗಂಧವನ್ನೂ ಈ ಬಳಪಕ್ಕೆ ಬಳಕೆ ಮಾಡಿರೋದ್ರಿಂದ ಉತ್ತಮ ಪರಿಮಳವನ್ನೂ ಪಸರಿಸುವ ಸಾಮರ್ಥ್ಯವನ್ನ ಹೊಂದಿವೆ .

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...