ತೆಲಂಗಾಣದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹೈದರಾಬಾದ್ನಲ್ಲಂತೂ ರಸ್ತೆಗಳು ನದಿಯಂತಾಗಿದ್ದು ವಾಹನಗಳೆಲ್ಲ ಕೊಚ್ಚಿಕೊಂಡು ಹೋಗ್ತಿವೆ.
ವರುಣಾರ್ಭಟದ ಬಿಸಿ ದೇಗುಲಗಳಿಗೂ ತಟ್ಟಿದೆ. ಬಲ್ಕಾಂಪೇಟ್ನ ಯಲ್ಲಮ್ಮ ದೇಗುಲದ ಗರ್ಭಗುಡಿಗೂ ನೀರು ಹೊಕ್ಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ .
ವಿಡಿಯೋದಲ್ಲಿ ಗರ್ಭಗುಡಿ ತುಂಬೆಲ್ಲ ನೀರು ಹೊಕ್ಕಿದ್ದು ದೇವಸ್ಥಾನ ಸಂಪೂರ್ಣ ನದಿಯಂತಾಗಿದೆ. ಇದರ ನಡುವೆಯೂ ಅರ್ಚಕರು ಯಲ್ಲಮ್ಮ ದೇವಿಗೆ ಪೂಜೆ ಕೈಗೊಂಡಿದ್ದಾರೆ,