ಹೈದ್ರಾಬಾದ್: ನಗರದಲ್ಲಿ ತಲ್ಲಣ ಮೂಡಿಸಿದ್ದ ಫಾರ್ಮಸಿ ವಿದ್ಯಾರ್ಥಿನಿ ಕಿಡ್ನಾಪ್ ಮತ್ತು ಅತ್ಯಾಚಾರ ಯತ್ನ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಅದು ಕಿಡ್ನಾಪ್ ಹಾಗೂ ರೇಪ್ ಯತ್ನ ಎರಡೂ ಅಲ್ಲ. ಕಟ್ಟುಕತೆ ಎಂದು ಪೊಲೀಸರು ತಿಳಿಸಿದ್ದರು. ಆದರೆ, ಪೊಲೀಸರು ಈ ವಿಷಯ ತಿಳಿಸುತ್ತಿದ್ದಂತೆ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಹೈದ್ರಾಬಾದ್ ಘಾಟ್ಕೇಸರ್ ಸಮೀಪದ ನಾಗಾರಾಮ್ ಗ್ರಾಮದಲ್ಲಿ 19 ವರ್ಷದ ಫಾರ್ಮಸಿ ವಿದ್ಯಾರ್ಥಿನಿಯನ್ನು ಕಿಡ್ನಾಪ್ ಮಾಡಿ ಅತ್ಯಾಚಾರ ಯತ್ನ ಮಾಡಲಾಗಿತ್ತು ಎಂಬ ಸುದ್ದಿ ಇಡೀ ರಾಜ್ಯದಲ್ಲಿ ತಲ್ಲಣ ಮೂಡಿಸಿತ್ತು. ಈ ಸಂಬಂಧ ರಾಚಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಭ್ರೂಣದ ಅಲ್ಟ್ರಾಸೌಂಡ್ ಸ್ಕ್ಯಾನ್ ಥೀಂ ಬಳಸಿ ಯುವತಿಯಿಂದ ವಿನೂತನ ಪೇಂಟಿಂಗ್
ಘಟನೆ ನಡೆದ ಎರಡು ವಾರದ ನಂತರ ಪೊಲೀಸರು ಮೊಬೈಲ್ ಸಿಗ್ನಲ್ ಆಧರಿಸಿ ತನಿಖೆ ನಡೆಸಿದಾಗ ಯುವತಿ ಹೇಳಿದ್ದು ಕಟ್ಟು ಕಥೆ ಎಂದು ಬಯಲಾಗಿತ್ತು.
ಈ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಯುವತಿ ನಿದ್ರೆ ಮಾತ್ರೆ ಸೇವಿಸಿದ್ದಳು. ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ ನಂತರ ಮೃತಪಟ್ಟಿದ್ದಾಳೆ.