ಅಮೆರಿಕದ ಜಾರ್ಜಿಯಾ ಎಂಬಲ್ಲಿ ಹೈದರಾಬಾದ್ ಮೂಲದ 37 ವರ್ಷದ ವ್ಯಕ್ತಿಯನ್ನ ಭಾನುವಾರ ಕೊಲೆಗೈಯಲಾಗಿದೆ. ಅನೇಕ ಬಾರಿ ಇರಿದು ಭಾರತೀಯನನ್ನ ಕೊಲೆಗೈಯಲಾಗಿದ್ದು ಮನೆಯ ಹೊರಗೆ ಶವ ಪತ್ತೆಯಾಗಿದೆ ಅಂತಾ ವರದಿಯಾಗಿದೆ.
ಮೃತ ವ್ಯಕ್ತಿಯನ್ನ ಆರಿಫ್ ಮೊಹಿನುದ್ದೀನ್ ಎಂದು ಗುರುತಿಸಲಾಗಿದೆ. ಈತ ಕಳೆದ 10 ವರ್ಷಗಳಿಂದ ಜಾರ್ಜಿಯಾದಲ್ಲಿ ಕಿರಾಣಿ ಅಂಗಡಿಯೊಂದನ್ನ ನಡೆಸುತ್ತಿದ್ದರೆನ್ನಲಾಗಿದೆ. ಈತನ ಅಂತ್ಯಕ್ರಿಯೆ ನಡೆಸಲು ಮುಂದಾಗಿರುವ ಕುಟುಂಬ ಅಮೆರಿಕಕ್ಕೆ ಪ್ರಯಾಣ ಬೆಳೆಸಲು ಸರ್ಕಾರದ ನೆರವು ಕೋರಿದೆ.
ನಾನು ಹಾಗೂ ನನ್ನ ತಂದೆ ತುರ್ತು ವೀಸಾ ಮೂಲಕ ಅಮೆರಿಕಕ್ಕೆ ಪ್ರಯಾಣ ಬೆಳೆಸಲು ಸರ್ಕಾರ ನಮಗೆ ವ್ಯವಸ್ಥೆ ಮಾಡಿಕೊಡಬೇಕೆಂದು ವಿನಂತಿಸುತ್ತೇವೆ. ನಮಗೆ ಮೊಹಿನುದ್ದೀನ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಡಿ ಅಂತಾ ಮೃತ ವ್ಯಕ್ತಿಯ ಪತ್ನಿ ಮೆಹ್ನಾಜ್ ಫಾತೀಮಾ ಮನವಿ ಮಾಡಿದ್ದಾರೆ.