ದಾಂಪತ್ಯ ಕಲಹವು ಫೈರಿಂಗ್ನಲ್ಲಿ ಅಂತ್ಯಗೊಂಡ ಘಟನೆ ಹೈದರಾಬಾದ್ನ ಬಿಲಾಲ್ ನಗರದಲ್ಲಿ ನಡೆದಿದೆ. 52 ವರ್ಷದ ಸೈಯದ್ ಹಬೀಬ್ ಹಶ್ಮಿ ಎಂಬಾತ ಪರವಾನಿಗಿ ಹೊಂದಿದ ಪಿಸ್ತೂಲ್ನಿಂದ ಪತ್ನಿ ಹಾಗೂ ಮಕ್ಕಳ ಮೇಲೆ ಫೈರಿಂಗ್ ನಡೆಸಿದ್ದಾನೆ. ಬುಲೆಟ್ ಗೋಡೆಗೆ ಹೋಗಿ ಬಡಿದ ಕಾರಣ ಪತ್ನಿ ಹಾಗೂ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ಈ ವಿಚಾರವಾಗಿ ಮಾಹಿತಿ ನೀಡಿದ ಕಲಾಪಥರ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಕೆ. ಸುದರ್ಶನ್, ಬಿಲಾಲ್ ನಗರದ ನಿವಾಸಿಯಾಗಿರುವ ಹಶ್ಮಿ ಸಂಜೆ 5 ಗಂಟೆ ಸುಮಾರಿಗೆ .22 rifle ಬಳಸಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಹಶ್ಮಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಶ್ಮಿ ವಿರುದ್ಧ ಸೆಕ್ಷನ್ 307 ಅಡಿಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಪತ್ನಿ ಹಾಗೂ ಮಕ್ಕಳ ಮೇಲೆಯೇ ಗುಂಡು ಹಾರಿಸಿದ ಪಾಪಿ ಪತಿ..!
09-03-2021 4:33PM IST / No Comments / Posted In: Latest News, India