ಹೈದರಾಬಾದ್‌ನ ಕಲಾವಿದರೊಬ್ಬರು ಮುಖದ ಮಾಸ್ಕ್‌ಗಳು ಹಾಗೂ ಗಾಳಿಪಟಗಳನ್ನು ಬೆಳ್ಳಿ ಹಾಗೂ ಚಿನ್ನದಲ್ಲಿ ಮಾಡುವ ಮೂಲಕ ಮಕರ ಸಂಕ್ರಾಂತಿಗೆ ಭರ್ಜರಿ ಕಲಾಕೃತಿಗಳನ್ನು ಹೊರತಂದಿದ್ದಾರೆ.
ದೇಶದ ಪ್ರತಿಯೊಂದು ರಾಜ್ಯವೂ ಸಹ ಮಕರ ಸಂಕ್ರಾಂತಿ ಆಚರಿಸುತ್ತಿದ್ದು, ಸುಗ್ಗಿಯ ಕಾಲವನ್ನು ಬರಮಾಡಿಕೊಳ್ಳಲಾಗುತ್ತಿದೆ. ದೇಶದ ಎಲ್ಲಾ ಭೂಭಾಗಗಳಲ್ಲೂ ಸಹ ಜನವರಿ 14ರಂದು ಸಂಕ್ರಾಂತಿ ಹಬ್ಬವನ್ನು ಬರಮಾಡಿಕೊಳ್ಳಲಾಗುತ್ತಿದೆ.
“ಪ್ರತಿ ವರ್ಷವೂ ನಾನು ಬೆಳ್ಳಿ ಹಾಗೂ ಚಿನ್ನದ ಗಾಳಿಪಟಗಳು ಹಾಗೂ ಮಾಂಜಾಗಳನ್ನು ಸಿದ್ಧಪಡಿಸಿ, ಹಬ್ಬದ ಬಳಿಕ ತಿರುಪತಿಯ ವೆಂಕಟೇಶ್ವರನಿಗೆ ಅರ್ಪಿಸುತ್ತಾ ಬಂದಿದ್ದೇನೆ. ಗಾಳಿಪಟ ಹಾಗೂ ಮಾಂಜಾಗಳೆರಡೂ ಒಟ್ಟಾರೆ 2.58 ಗ್ರಾಮ್ ತೂಕ ತೂಗುತ್ತವೆ” ಎಂದು ಶಿಲ್ಪಿ ಆನಂದ್ ರೆಡ್ಡಿ ತಿಳಿಸಿದ್ದಾರೆ.
https://twitter.com/ANI/status/1349089124670607360?ref_src=twsrc%5Etfw%7Ctwcamp%5Etweetembed%7Ctwterm%5E1349089124670607360%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fhyderabad-artist-makes-miniature-kites-face-masks-out-of-gold-and-silver-for-makar-sankranti-3284240.html