ದೇಶದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಈ ಮಧ್ಯೆ ಪ್ರಾಣಿಗಳಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೈದ್ರಾಬಾದ್ ನ ನೆಹರೂ ಪಾರ್ಕ್ ನಲ್ಲಿ 8 ಏಷ್ಯಾ ಸಿಂಹಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ಸಿಂಹಗಳ ವರದಿ ಪಾಸಿಟಿವ್ ಬಂದಿದೆ ಎಂದು ಸಿಸಿಎಂಬಿ, ನೆಹರೂ ಪಾರ್ಕ್ ಅಧಿಕಾರಿಗಳಿಗೆ ಹೇಳಿದೆ. ಆದ್ರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಸಿಂಹಗಳಿಗೆ ಕೊರೊನಾ ಲಕ್ಷಣ ಕಾಣಿಸಿಕೊಂಡಿರುವುದು ನಿಜ. ಆದ್ರೆ ಆರ್ ಟಿ ಪಿ ಸಿ ಆರ್ ವರದಿ ನಮ್ಮ ಕೈ ಸೇರಿಲ್ಲವೆಂದು ನೆಹರೂ ಪಾರ್ಕ್ ವೈದ್ಯರು ಹೇಳಿದ್ದಾರೆ. ವರದಿ ಬಂದ ನಂತ್ರ ಅಧಿಕೃತ ಮಾಹಿತಿ ನೀಡುವುದಾಗಿ ಅವರು ಹೇಳಿದ್ದಾರೆ. ಬ್ರಾಂಕ್ಸ್ ನಲ್ಲಿಯೂ ಎಂಟು ಹುಲಿ ಹಾಗೂ ಸಿಂಹಗಳ ಪರೀಕ್ಷೆ ಮಾಡಲಾಗಿದೆ. ಆದ್ರೆ ಪರೀಕ್ಷೆಯ ಯಾವುದೇ ವರದಿ ಹೊರ ಬಂದಿಲ್ಲ. ಹಾಂಗ್ ಕಾಂಗ್ ನಲ್ಲಿ ನಾಯಿಗಳು ಮತ್ತು ಬೆಕ್ಕುಗಳಿಗೆ ಕೊರೊನಾ ವೈರಸ್ ಕಂಡು ಬಂದಿದೆ ಎನ್ನಲಾಗಿದೆ.
ಸಿಂಹಗಳಿಗೆ ವೈರಸ್ ಲಕ್ಷಣ ಕಂಡು ಬಂದಿದೆ. ಕೆಮ್ಮು ಕಾಣಿಸಿಕೊಂಡಿದೆ. ಮೂಗು ಸೋರುತ್ತಿದೆ. ಹಸಿವು ಕಡಿಮೆಯಾಗಿದೆ ಎಂದು ನೆಹರು ಪಾರ್ಕ್ ವೈದ್ಯರು ಹೇಳಿದ್ದಾರೆ.