alex Certify ಅಕ್ರಮ ಸಂಬಂಧ: ವಯಸ್ಸಿನ ಅಂತರದ ಕಾರಣ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದ ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ರಮ ಸಂಬಂಧ: ವಯಸ್ಸಿನ ಅಂತರದ ಕಾರಣ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದ ಪತ್ನಿ

ನವದೆಹಲಿ: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಪ್ರಿಯಕರ ಮತ್ತು ಆತನ ಸಹೋದರನ ಸಹಕಾರದಿಂದ ಪತಿಯನ್ನು ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.

30 ವರ್ಷದ ಪ್ರಿಯಾಂಕಾ ಬಂಧಿತ ಮಹಿಳೆ. ಆಕೆಯ ಪ್ರಿಯಕರ ವೀರೂ ಬರ್ಮಾ ತಲೆಮರೆಸಿಕೊಂಡಿದ್ದಾನೆ. ಕೊಲೆಗೆ ಸಹಕಾರ ನೀಡಿದ ವೀರೂ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ. ಅನಾರೋಗ್ಯದಿಂದ ಪತಿ ಸಾವನ್ನಪ್ಪಿರುವುದಾಗಿ ಪ್ರಿಯಾಂಕಾ ಹೇಳಿದ್ದಳು. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವುದು ಗೊತ್ತಾಗಿದೆ.

ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಪ್ರಿಯಾಂಕಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. ಮಹಿಳೆ ಮತ್ತು ಆಕೆಯ ಗಂಡನ ನಡುವೆ 20 ವರ್ಷ ವಯಸ್ಸಿನ ಅಂತರವಿತ್ತು. ದಂಪತಿಗೆ ಮಕ್ಕಳಾಗಿರಲಿಲ್ಲ. ವಯಸ್ಸಿನ ಅಂತರದ ಕಾರಣದಿಂದ ಪ್ರಿಯಾಂಕಾ ಖುಷಿಯಾಗಿರಲಿಲ್ಲ. ಈ ನಡುವೆ ಆಕೆ ತನ್ನ ಸಹೋದರಿ ಮೂಲಕ ಮುರಾದ್ ನಗರದಲ್ಲಿ ಪರಿಚಯವಾಗಿದ್ದ ವೀರೂ ಜೊತೆಗೆ ಅಕ್ರಮ ಸಂಬಂಧ ಬೆಳೆಸಿದ್ದಾಳೆ.

ವೀರೂ ಸಹೋದರ ಕರಣ್ ನನ್ನು ಸಂಬಂಧಿ ಎಂದು ಹೇಳಿ ಮನೆಯಲ್ಲಿ ಇಟ್ಟುಕೊಂಡಿದ್ದ ಪ್ರಿಯಾಂಕಾ ಪತಿಗೆ ಊಟದಲ್ಲಿ ವಿಷ ಬೆರೆಸಿ ಕೊಲೆ ಮಾಡಲು ಸಂಚು ರೂಪಿಸಿದ್ದಾಳೆ. ಆಗಸ್ಟ್ 18 ರಂದು ವಿಷ ಬೆರೆಸಿದ ಊಟ ಕೊಟ್ಟು ಅಸ್ವಸ್ಥನಾಗಿದ್ದ ಗಂಡನನ್ನು ಕತ್ತು ಹಿಸುಕಿ ಕೊಲೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾಳೆ. ತನಿಖೆ ನಡೆಸಿದ ಪೊಲೀಸರು, ಪ್ರಿಯಾಂಕಾ, ಆಕೆಯ ಪ್ರಿಯಕರನ ಸಹೋದರ ಕರಣ್ ನನ್ನು ಬಂಧಿಸಿದ್ದು, ನಾಪತ್ತೆಯಾಗಿರುವ ಪ್ರಿಯಕರ ವೀರೂ ಬಂಧನಕ್ಕೆ ಬಲೆ ಬೀಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...