ಸಂಗಾತಿಗೆ ಏನು ಉಡುಗೊರೆ ಕೊಡಬೇಕು ಎಂಬುದು ಬಹಳ ಗಂಡಸರ ತಲೆಗೆ ಕೆಲಸ ಕೊಡುವ ವಿಷಯ. ಇಲ್ಲೊಬ್ಬ ವ್ಯಕ್ತಿ ತನ್ನ ಮಡದಿಗೆ ಸ್ಮರಣೀಯ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ.
ಕ್ರೇಲಿಫ್ಟ್ ಎಂಬ ಹೆಸರಿನಲ್ಲಿ ವ್ಲಾಗಿಂಗ್ ಮಾಡುವ ರೋಹಿತ್ ಹೆಸರಿನ ವ್ಯಕ್ತಿಯೊಬ್ಬರು ತಮ್ಮ ಮಡದಿಗೆ ಸ್ಪೆಷಲ್ ಫೀಲಿಂಗ್ ಬರುವಂತೆ ಮಾಡಿದ್ದಾರೆ. ರಾಯಲ್ ಎನ್ಫೀಲ್ಡ್ನ ಮಿಟಿಯಾರ್ 350 ಬೈಕ್ ಅನ್ನು ಉಡುಗೊರೆ ಕೊಡಲು ಮುಂದಾಗಿದ್ದಾರೆ ಈ ಪತಿ.
ಬಡ್ಡಿ ದರ ಬಗ್ಗೆ RBI ಹಣಕಾಸು ನೀತಿ ಪರಾಮರ್ಶೆ ಸಮಿತಿ ಸಭೆ ನಿರ್ಧಾರ
ಬೈಕ್ ಅನ್ನು ತಂದು ತಮ್ಮ ವಸತಿ ಸಮುದಾಯದ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ ರೋಹಿತ್, ತಮ್ಮ ಮಡದಿಯನ್ನು ವ್ಲಾಗ್ ಶೂಟಿಂಗ್ಗೆಂದು ಕರೆದಿದ್ದಾರೆ. ಆಗ ಅಲ್ಲಿ ನಿಂತಿದ್ದ ಬೈಕ್ ಒಂದನ್ನು ಗಮನಿಸಿದ ಆತನ ಮಡದಿಗೆ ಆ ಬೈಕ್ ತನಗೇ ತಂದಿರುವುದು ಎಂದು ತಿಳಿದು ಅಚ್ಚರಿಯಾಗುತ್ತದೆ. ಈ ಕ್ಷಣದ ವಿಡಿಯೋ ಮಾಡಿ ಯೂಟ್ಯೂಬ್ನಲ್ಲಿ ಶೇರ್ ಮಾಡಿದ್ದಾರೆ ರೋಹಿತ್.