
ಆದರೆ ಕಿತ್ತಳೆ ಹಣ್ಣಿನ ಸಿಪ್ಪೆ ಕೂಡ ಚರ್ಮದ ಆರೋಗ್ಯಕ್ಕೆ ಹಾಗೂ ತೂಕ ಇಳಿಕೆಗೆ ಸಹಕಾರಿ. ಕಿತ್ತಳೆ ಹಣ್ಣಿನ ಸಿಪ್ಪೆಯನ್ನ ಹಿಂಡಿದಾಗ ಅದರಿಂದ ರಸ ಚಿಮ್ಮುವ ವಿಚಾರ ನಿಮಗೆ ಗೊತ್ತಿರಬಹುದು. ಸ್ಲೋ ಮೋಷನ್ನಲ್ಲಿ ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ರಸವನ್ನ ತೆಗೆಯುತ್ತಿರುವ ವಿಡಿಯೋ ಇದೀಗ ರೆಡಿಟ್ನಲ್ಲಿ ಸಖತ್ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸೂರ್ಯನ ಬೆಳಕಿಗೆ ಮುಖ ಮಾಡಿ ಕಿತ್ತಳೆ ಹಣ್ಣಿನ ಸಿಪ್ಪೆಯನ್ನ ಹಿಡಿದಿರ್ತಾರೆ. ಹಾಗೂ ಅದನ್ನ ಹಿಂಡುತ್ತಾರೆ. ಈ ವೇಳೆ ಕಿತ್ತಳೆ ಹಣ್ಣಿನ ಸಿಪ್ಪೆಯ ರಸ ಎಲ್ಲಾ ಚಿಮ್ಮುತ್ತೆ. ಈ ವಿಡಿಯೋ ಕಣ್ಣಿಗೆ ತುಂಬಾನೇ ಮಜ ನೀಡುವಂತಿದೆ.