
ಆದರೆ ಲಸಿಕಾ ಕೇಂದ್ರಗಳಲ್ಲಿ ಹೆಚ್ಚುತ್ತಿರುವ ಜನದಟ್ಟಣೆ ಕೂಡ ಆತಂಕಕಾರಿ ವಿಚಾರವಾಗಿದೆ. ಈ ವಿಷಯವಾಗಿ ಮುಂಬೈನ ವೈದ್ಯ ಡಾ. ತುಷಾರ್ ಶಾ ಎಂಬವರು ವಿಡಿಯೋವೊಂದನ್ನ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲಸಿಕಾ ಕೇಂದ್ರದಲ್ಲಿ ಲಸಿಕೆಯನ್ನಷ್ಟೇ ಪಡೆದುಕೊಂಡು ಬನ್ನಿ ಬದಲಾಗಿ ಸೋಂಕನ್ನಲ್ಲ ಎಂದು ಹೇಳಲಾಗಿದೆ. ಇದರಲ್ಲಿ ಡಾ. ಶಾ ಪ್ಲೇ ಕಾರ್ಡ್ ಸಹಾಯದಿಂದ ಲಸಿಕೆ ಕೇಂದ್ರಗಳಲ್ಲಿ ಯಾವ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಅನ್ನೋದ್ರ ಬಗ್ಗೆ ಮಾಹಿತಿ ನೀಡಿದ್ದಾರೆ.
ವೈದ್ಯ ಶಾ ಮಾಸ್ಕ್ ಬಳಕೆ ಮಾಡುವ ಮಹತ್ವವನ್ನ ಹೇಳಿದ್ದಾರೆ. ಆದಷ್ಟು ಡಬಲ್ ಮಾಸ್ಕ್ ಧರಿಸಿ ಅಂತಲೂ ವೈದ್ಯ ಸಲಹೆ ನೀಡಿದ್ದಾರೆ. ಎನ್ 95 ಮಾಸ್ಕ್ಗಳ ಮೇಲೆ ಬಟ್ಟೆಯ ಇಲ್ಲವೇ ಸರ್ಜಿಕಲ್ ಮಾಸ್ಕ್ ಧರಿಸಿ. ಕೈನಿಂದ ಪದೇ ಪದೇ ಮುಖ, ಕಣ್ಣು, ಹಾಗೂ ಮೂಗನ್ನ ಮುಟ್ಟಿಕೊಳ್ಳಬೇಡಿ. ಗ್ಲೌಸ್ಗಳನ್ನ ಬಳಕೆ ಮಾಡಿ. ಯಾರ ಜೊತೆಯೂ ಕೈಕುಲುಕಿ ಮಾತನಾಡುವ ಅವಶ್ಯಕತೆ ಬೇಡ. ನೀವು ಗ್ಲೌಸ್ ಧರಿಸಿದ್ದರೂ ಕೈಕುಲುಕಬೇಡಿ. ಗ್ಲೌಸ್ ಧರಿಸಿದ್ದರೂ ಸ್ಯಾನಿಟೈಸರ್ ಬಳಕೆ ಮಾಡಿ. ಅಲ್ಲದೇ ಕ್ಯೂನಲ್ಲಿ ನಿಂತಾಗ ಇನ್ನೊಬ್ಬರ ಜೊತೆ ಮಾತನಾಡಬೇಡಿ ಎಂದಿದ್ದಾರೆ.