ಸಾರ್ವಜನಿಕರ ಅನುಕೂಲಕ್ಕಾಗಿ ಭಾರತೀಯ ಚುನಾವಣಾ ಆಯೋಗ ಡಿಜಿಟಲ್ ಮತದಾರರ ಗುರುತಿನ ಚೀಟಿ ಸೇವೆ ಶುರು ಮಾಡಿದೆ. ಇನ್ಮುಂದೆ ಮತದಾರರ ಗುರುತಿನ ಚೀಟಿ ಮುದ್ರಿಸುವ ಅಗತ್ಯವಿಲ್ಲ. ಮೊಬೈಲ್ ನಲ್ಲಿಯೇ ಮತದಾರರ ಚೀಟಿಯನ್ನು ಇಟ್ಟುಕೊಳ್ಳಬಹುದು.
ಇದನ್ನು ಎಲೆಕ್ಟ್ರಾನಿಕ್ ಎಲೆಕ್ಟರಲ್ ಫೋಟೋ ಐಡೆಂಟಿಟಿ ಕಾರ್ಡ್ ( ಇ-ಇಪಿಐಸಿ) ಎಂದು ಕರೆಯಲಾಗುತ್ತದೆ. ಇದು ಡಿಜಿಟಲ್ ಆಧಾರ್ ರೀತಿಯಲ್ಲೇ ಇರುತ್ತದೆ. ಇಲ್ಲಿಯೇ ಮತದಾರರ ಗುರುತಿನ ಚೀಟಿಯನ್ನು ಡೌನ್ಲೋಡ್ ಮಾಡಬಹುದು.
ಕೇವಲ12 ರೂಪಾಯಿಗೆ ಸಿಗುತ್ತೆ ಇಷ್ಟೊಂದು ಲಾಭ: ಕೇಂದ್ರ ಸರ್ಕಾರದ ಈ ಯೋಜನೆಯ ಬಗ್ಗೆ ಇಲ್ಲಿದೆ ಮಾಹಿತಿ
ಮೊದಲು ಚುನಾವಣೆ ಆಯೋಗದ ವೆಬ್ಸೈಟ್ voterportal.eci.gov.in ಗೆ ಹೋಗಬೇಕು. ಅಲ್ಲಿ ನಿಮ್ಮ ಮಾಹಿತಿ ನೀಡಿ ಅಕೌಂಟ್ ತೆರೆಯಬೇಕು. ನಂತ್ರ ನೀವು ಲಾಗಿನ್ ಮಾಡಬೇಕು. ನಂತ್ರ ಇ-ಇಪಿಐಸಿ ಡೌನ್ಲೋಡ್ ಆಯ್ಕೆಗೆ ಹೋಗಬೇಕು. ಅಲ್ಲಿ ಇಪಿಐಸಿ ನಂಬರ್ ಅಥವಾ ರೆಫರೆನ್ಸ್ ನಂಬರ್ ಹಾಕಬೇಕು. ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಅಲ್ಲಿ ಒಟಿಪಿ ಹಾಕಿ ಇ-ಇಪಿಐಸಿ ಸಲ್ಲಿಸಬೇಕು. ನಂತ್ರ ಡಿಜಿಟಲ್ ಕಾರ್ಡ್ ಡೌನ್ಲೋಡ್ ಮಾಡಬೇಕು.
ಡಿಜಿಟಲ್ ಮತದಾರರ ಚೀಟಿ ಡೌನ್ಲೋಡ್ ಮಾಡುವ ಎರಡನೇ ಹಂತ ಇಂದಿನಿಂದ ಶುರುವಾಗಿದೆ. ಎಲ್ಲ ಮತದಾರರೂ ಡಿಜಿಟಲ್ ಮತದಾರರ ಚೀಟಿ ಡೌನ್ಲೋಡ್ ಮಾಡಬಹುದು. ಮೊದಲು ಹಂತ ಜನವರಿ 25ರಿಂದ ಜನವರಿ 31ರವರೆಗೆ ನಡೆದಿತ್ತು. ಕಳೆದ ವರ್ಷ ಮತದಾರರ ಚೀಟಿಗೆ ಅರ್ಜಿ ಸಲ್ಲಿಸಿದವರು ಮಾತ್ರ ಡೌನ್ಲೋಡ್ ಮಾಡಿಕೊಳ್ಳುವ ಆಯ್ಕೆಯನ್ನು ಆಗ ನೀಡಲಾಗಿತ್ತು.