`ಆಧಾರ್ ಕಾರ್ಡ್’ ನಲ್ಲಿ ತಪ್ಪಾಗಿರುವ `ಜನ್ಮದಿನಾಂಕ’ವನ್ನು ಸರಿಪಡಿಸುವುದು ಹೇಗೆ? ಇಲ್ಲಿದೆ ಮಾಹಿತಿ
ಸಿಮ್ ಕಾರ್ಡ್ (Sim Card) ಪಡೆಯುವುದರಿಂದ ಹಿಡಿದು ಬ್ಯಾಂಕ್ ಖಾತೆ (Bank Account) ತೆರೆಯಲು ಆಧಾರ್ ಕಾರ್ಡ್ (Aadhar Card) ಮುಖ್ಯವಾಗಿ ಬೇಕು, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡುವ ಆಧಾರ್ ಕಾರ್ಡ್ ಕಾರ್ಡ್ ಹೊಂದಿರುವವರ ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ಮಾಹಿತಿಯನ್ನು ಒಳಗೊಂಡಿದೆ. ಅನೇಕ ಜನರು ಆಧಾರ್ ಕಾರ್ಡ್ ನಲ್ಲಿ ತಪ್ಪಗಾಗಿ ಜನ್ಮ ದಿನಾಂಕವನ್ನು (Date of Birth) ತಪ್ಪಾಗಿ ಮುದ್ರಿಸಲಾಗುತ್ತದೆ.
ನಿಮ್ಮ ಆಧಾರ್ ಕಾರ್ಡ್ನಲ್ಲಿ ಹುಟ್ಟಿದ ದಿನಾಂಕವನ್ನು ತಪ್ಪಾಗಿ ಮುದ್ರಿಸಿದ್ದರೆ, ಇದಕ್ಕಾಗಿ ಯುಐಡಿಎಐ ನಿಯಮವಿದೆ ಇದರ ಪ್ರಕಾರ, ನಿಮ್ಮ ಆಧಾರ್ ಕಾರ್ಡ್ ನಲ್ಲಿ ಮುದ್ರಿಸಲಾದ ಜನ್ಮ ದಿನಾಂಕ ಮತ್ತು ನಿಜವಾದ ಹುಟ್ಟಿದ ದಿನಾಂಕವನ್ನು ಬದಲಾಯಿಸಲು ನೀವು ಬಯಸಿದರೆ, ಮೂರು ವರ್ಷಗಳಿಗಿಂತ ಕಡಿಮೆ ವ್ಯತ್ಯಾಸವಿರಬೇಕು.
ಆಧಾರ್ ಕಾರ್ಡ್ ನಲ್ಲಿ ನಿಮ್ಮ ಜನ್ಮ ದಿನಾಂಕ ತಪ್ಪಾಗಿದ್ದರೆ ಈ ಸರಿಪಡಿಸಲು ಈ ದಾಖಲೆಗಳು ಬೇಕು
ನಿಮ್ಮ ಆಧಾರ್ ಕಾರ್ಡ್ ನಲ್ಲಿ ಜನ್ಮ ದಿನಾಂಕವನ್ನು ತಪ್ಪಾಗಿ ಮುದ್ರಿಸಿದ್ದರೆ, ಅದನ್ನು ಸರಿಪಡಿಸಲು ನಿಮಗೆ ಕೆಲವು ದಾಖಲೆಗಳು ಬೇಕಾಗುತ್ತವೆ. ಪ್ಯಾನ್ ಕಾರ್ಡ್. ಜನನ ಪ್ರಮಾಣಪತ್ರ, ಪಾಸ್ಪೋರ್ಟ್, ಬ್ಯಾಂಕ್ ಪಾಸ್ಬುಕ್, ವಿಶ್ವವಿದ್ಯಾಲಯದಿಂದ ನೀಡಲಾದ ಪ್ರಮಾಣಪತ್ರ ಬೇಕಾಗುತ್ತದೆ.
ಆಧಾರ್ ಕಾರ್ಡ್ ನಲ್ಲಿ ಜನ್ಮ ದಿನಾಂಕವನ್ನು ಹೇಗೆ ಬದಲಾಯಿಸಬಹುದು?
1) ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಹೋಗಿ
2)ಸೇವಾ ಕೇಂದ್ರದಲ್ಲಿ ತಿದ್ದುಪಡಿ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಅದರಲ್ಲಿ ಹುಟ್ಟಿದ ದಿನಾಂಕವನ್ನು 3)ಸರಿಪಡಿಸುವ ಬಗ್ಗೆ ಮಾಹಿತಿಯನ್ನು ನೀಡಿ
4)ಇದರೊಂದಿಗೆ, ಸಂಬಂಧಿತ ದಾಖಲೆಯ ಪ್ರತಿಯನ್ನು ಲಗತ್ತಿಸಿ ಮತ್ತು ಅದನ್ನು ಮೂಲ ಅಧಿಕಾರಿಗೆ ತೋರಿಸಿ.
ನಂತರ ಫಾರ್ಮ್ ಅನ್ನು ಸಲ್ಲಿಸಬೇಕು.