ಅರೆಕ್ಷಣದಲ್ಲಿ ಒಂದು ವಿಷಯ ಸಾಮಾಜಿಕ ಜಾಲತಾಣಗಳ ಮೂಲಕ ವಿಶ್ವದ ಮೂಲೆ, ಮೂಲೆ ತಲುಪುತ್ತಿದೆ. ಇದು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೊಡ್ಡ ಕ್ರಾಂತಿಯೇ ಹೌದು. ಇದರಿಂದ ಸಾಕಷ್ಟು ಅನುಕೂಲಗಳೂ ಆಗುತ್ತಿವೆ. ಜತೆಗೆ ಅನಾನುಕೂಲಗಳೂ ಇವೆ.
ಜಾಲತಾಣಗಳಲ್ಲಿ ವೈರಲ್ ಆಗುವ ಸುಳ್ಳು ಸುದ್ದಿಗಳು ಕೋಮು ಗಲಭೆಯಂಥ ಸನ್ನಿವೇಶ ಸೃಷ್ಟಿಸಿದ್ದನ್ನು ನೋಡಿದ್ದೇವೆ. ಕೊರೊನಾ ವೈರಸ್ ಕಾಲದಲ್ಲಿ ಹರಡಿದ ಸುದ್ದಿಗಳಿಂದ ಜನರಲ್ಲಿ ಭಯ ಹೆಚ್ಚಲು ಕಾರಣವಾಗಿದೆ. ಕೊರೊನಾ ಕಾಲದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ ಹರಡುವ ಪ್ರಮಾಣ ಇದ್ದಕ್ಕಿದ್ದಂತೆ ಹೆಚ್ಚಿದ್ದರಿಂದ ಪುಣೆ ಪೊಲೀಸರು ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಸುಳ್ಳು ಸುದ್ದಿಯ ಸರಪಳಿಯನ್ನು ತುಂಡು ಮಾಡುವುದು ಹೇಗೆ..? ಎಂಬ ಬಗ್ಗೆ ಪೊಲೀಸರು ಇತ್ತೀಚೆಗೆ ಪೋಸ್ಟ್ ಒಂದನ್ನು ಹಾಕಿದ್ದಾರೆ. “ತಪ್ಪು ಮಾಹಿತಿ, ಸುಳ್ಳು ಸುದ್ದಿಗಳ ಸರಪಳಿ ತುಂಡು ಮಾಡಿ, ಫಾರ್ವರ್ಡ್ ಬಟನ್ ಒತ್ತುವ ಮೊದಲು ಎರಡು ನಿಮಿಷ ಯೋಚಿಸಿ, ಪರಿಶೀಲಿಸಿ” ಎಂದು ಪುಣೆ ಪೊಲೀಸ್ ಇಲಾಖೆಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆಯಲಾಗಿದೆ. ಪೋಸ್ಟ್ ಬಹುಬೇಗನೇ ವೈರಲ್ ಆಗಿದೆ.
https://twitter.com/ambitiousasif/status/1295992600571179009?ref_src=twsrc%5Etfw%7Ctwcamp%5Etweetembed%7Ctwterm%5E1295992600571179009%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fhow-to-break-the-chain-of-fake-news-verify-and-forward-says-pune-police-2801359.html