ಭಾರತದ ಗಡಿಪ್ರದೇಶಗಳನ್ನು ಸೇರಿಸಿಕೊಂಡು ಹೊಸ ಭೂಪಟ ಮಾಡಿಕೊಂಡಿರುವ ನೇಪಾಳ, ಟಿಕ್ ಟಾಕ್ ಮೂಲಕ ಖುಷಿ ಹಂಚಿಕೊಂಡಿದೆ.
ನಮ್ಮ ಗಡಿ ಪ್ರದೇಶಗಳಾದ ಲಿಪುಲೇಖ್, ಕಾಲಾಪಾನಿ, ಲಿಂಪಿಯಾಧುರ ಮೇಲೆ ಹಕ್ಕುಸ್ವಾಮ್ಯ ಸಾಧಿಸುವ ಸಲುವಾಗಿಯೇ ನೇಪಾಳದ ಸಂಸತ್ತಿನಲ್ಲಿ ಸಂವಿಧಾನ ಬದಲಾವಣೆಗೆ ಪಕ್ಷಾತೀತ ಬೆಂಬಲ ವ್ಯಕ್ತವಾಗಿದೆ.
ಗಡಿ ರಾಷ್ಟ್ರವಾದ ನೇಪಾಳದ ಈ ನಡೆಯನ್ನು ಒಪ್ಪಲಾಗುವುದಿಲ್ಲ ಎಂದು ಭಾರತವೂ ತಿರುಗೇಟು ನೀಡಿದೆ.
ಆದರೆ, ತಮ್ಮದೇ ಸಂಭ್ರಮದಲ್ಲಿರುವ ನೇಪಾಳಿಗರು, ಸಾಮ್ರಾಜ್ಯ ವಿಸ್ತರಣೆಯ ಭ್ರಮೆಯಲ್ಲಿ ಚೀನಾದ ಟಿಕ್ ಟಾಕ್ ಆ್ಯಪ್ ಬಳಸುವ ಮೂಲಕ ಭಾರತದ ವಿರುದ್ಧ ಹಾಗೂ ಚೀನಾದ ಪರ ತಾವಿದ್ದೇವೆ ಎಂಬುದನ್ನು ಸಾಬೀತುಪಡಿಸಿಕೊಂಡಂತಿದೆ.