ವಾಸನೆ ಸಾಮರ್ಥ್ಯ ಕಳೆದುಕೊಳ್ಳುವುದು ಹಾಗೂ ನಾಲಗೆ ರುಚಿ ಗ್ರಹಿಕೆ ಮಾಡೋದನ್ನ ನಿಲ್ಲಿಸೋದು ಇವೆಲ್ಲ ಕೊರೊನಾ ಲಕ್ಷಣಗಳು ಎಂದು ಹೇಳಲಾಗುತ್ತೆ.
ಇನ್ನು ಗಂಭೀರ ಪ್ರಕರಣಗಳಲ್ಲಿ ಶ್ವಾಸಕೋಶದ ಮೇಲೆ ವೈರಸ್ ವಿಪರೀತ ಮಟ್ಟದಲ್ಲಿ ದಾಳಿ ಮಾಡುತ್ತೆ. ಆದರೆ ಕಡಿಮೆ ಗುಣ ಲಕ್ಷಣ ಹೊಂದಿರುವ ಬಹುತೇಕ ಮಂದಿ ಈ ವಾಸನೆ ಹಾಗೂ ರುಚಿಯ ಸಮಸ್ಯೆಯಿಂದ ಬಳಲುತ್ತಿರ್ತಾರೆ.
ಕೊರೊನಾ ದೇಶಕ್ಕೆ ಬಂದು ಅಪ್ಪಳಿಸಿ 10 ತಿಂಗಳಿಗೆ ಎಂಟ್ರಿ ಕೊಟ್ಟ ಈ ಸಂದರ್ಭದಲ್ಲಿ ಭಾರತೀಯ ಆರೋಗ್ಯ ತಜ್ಞರು ಕೊರೊನಾ ಗುಣಲಕ್ಷಣಗಳ ಮೇಲೆ ಹೊಸ ಅಧ್ಯಯನವೊಂದನ್ನ ಮಾಡಿದ್ದಾರೆ.
ಇದರನ್ವಯ ಗಂಭೀರ ಸ್ಥಿತಿಗೆ ತಲುಪಿ ಐಸಿಯುಗೆ ಹೋಗುವ ಸೋಂಕಿತರಲ್ಲಿ ಈ ವಾಸನೆ ಹಾಗೂ ರುಚಿ ಕಳೆದುಕೊಳ್ಳುವ ಲಕ್ಷಣ ಹೆಚ್ಚಾಗಿ ಕಂಡುಬರಲ್ಲ ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಹೃದಯ ತಜ್ಞ ಡಾ. ಅರುಣ್ ಲಖನ್ಪಾಲ್, ರುಚಿ ಹಾಗೂ ವಾಸನೆ ಕಳೆದುಕೊಳ್ಳೋದು ನಿಜಕ್ಕೂ ಒಳ್ಳೆಯ ಲಕ್ಷಣ ಎಂದಿದ್ದಾರೆ. ಶೇಕಡಾ 40 ರಷ್ಟು ಸೋಂಕಿತರು ರುಚಿ ಹಾಗೂ ವಾಸನೆ ಕಳೆದುಕೊಳ್ತಾರೆ. ನಿಜಕ್ಕೂ ಇದೊಂದು ಒಳ್ಳೆಯ ಗುಣಲಕ್ಷಣ. ಇಂತವರು ಗಂಭೀರವಾಗಿ ವೈರಸ್ ದಾಳಿಗೆ ತುತ್ತಾಗಿರೋದಿಲ್ಲ ಎಂದು ಹೇಳಿದ್ದಾರೆ.