ಸದ್ಯ ಆಧಾರ್ ಕಾರ್ಡ್ ಭಾರತೀಯ ನಾಗರಿಕರಿಗೆ ಪ್ರಮುಖ ದಾಖಲೆಯಾಗಿದೆ. ಸಿಮ್ ಖರೀದಿಸುವುದರಿಂದ ಹಿಡಿದು ಸರ್ಕಾರಿ ಮತ್ತು ಖಾಸಗಿ ವಲಯದವರೆಗೆ ಎಲ್ಲೆಡೆ ಆಧಾರ್ ಕಾರ್ಡ್ ಅಗತ್ಯವಿದೆ.
ಪ್ರತಿಯೊಂದು ಕೆಲಸಕ್ಕೂ ಬೇಕಾಗಿರುವ ಆಧಾರ್ ಕಾರ್ಡ್ ನಕಲಿ ಕೂಡ ಆಗಿರಬಹುದು. ನಿಮ್ಮ ಬಳಿ ಇರುವ ಆಧಾರ್ ಕಾರ್ಡ್ ನಕಲಿಯಾ ಅಥವಾ ಅಸಲಿಯಾ ಎಂಬುದನ್ನು ತಿಳಿಯುವುದು ಬಹಳ ಮುಖ್ಯ.
ಆಧಾರ್ ಗೆ ಸಂಬಂಧಿಸಿದ ಆನ್ಲೈನ್ ಮಾಹಿತಿ ಪಡೆಯಲು ಮೊಬೈಲ್ ನಂಬರ್ ಬೇಕು. ನಿಮ್ಮ ಮೊಬೈಲ್ ನಂಬರ್ ಆಧಾರ್ ಜೊತೆ ಸೇರಿರಬೇಕು. ಆಗ ಮಾತ್ರ ನೀವು ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಬಹುದು. ಜೊತೆಗೆ 1947 ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ ದೂರು ಸಲ್ಲಿಸಬಹುದು.
ಆಧಾರ್ ಕಾರ್ಡ್ ಅಸಲಿಯತ್ತು ತಿಳಿಯುವುದು ಬಹಳ ಸುಲಭ. ಮೊದಲು ಅಧಿಕೃತ ವೆಬ್ ಸೈಟ್ https://resident.uidai.gov.in/aadhaarverification ಗೆ ಭೇಟಿ ನೀಡಬೇಕು. ಅಲ್ಲಿ ಆಧಾರ್ ವೆರಿಫಿಕೇಷನ್ ಪೇಜ್ ತೆರೆದುಕೊಳ್ಳುತ್ತದೆ. ಅದ್ರಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿದ ನಂತ್ರ ಪರಿಶೀಲಿಸು ಬಟನ್ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಸಂಖ್ಯೆ ಸರಿಯಾಗಿದ್ದರೆ, ಹೊಸ ಪುಟ ತೆರೆಯುತ್ತದೆ. ಅಲ್ಲಿ ಆಧಾರ್ ಸಂಖ್ಯೆಯ ಒಂದು ಮೆಸ್ಸೇಜ್ ಇರಲಿದೆ. ಪೂರ್ಣ ವಿವರ ಕೆಳಗೆ ಇರುತ್ತದೆ. ಒಂದು ವೇಳೆ ಆಧಾರ್ ಸಂಖ್ಯೆ ನಕಲಿಯಾಗಿದ್ದರೆ, ಅನ್ ವ್ಯಾಲಿಡ್ ಆಧಾರ್ ನಂಬರ್ ಎಂದು ಬರುತ್ತದೆ.