
ಹಾರ್ಲೆ ಡೇವಿಡ್ಸನ್ ಬೈಕ್ ಎಂದರೆ ಬೈಕ್ ಕ್ರೇಜ್ ಇದ್ದವರಿಗೆ ಒಂಥರಾ ರೋಮಾಂಚನ.
ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅವರು ಭಾನುವಾರ ನಾಗಪುರದಲ್ಲಿ ಹಾರ್ಲೆ ಡೇವಿಡ್ಸನ್ ಬೈಕ್ ಏರಿದ್ದು ಫೋಟೋ ವೈರಲ್ ಆಗುವ ಮೂಲಕ ನೆಟ್ಟಿಗರಿಗೆ ಅಚ್ಚರಿ ಮೂಡಿಸಿದ್ದಾರೆ.
2000 ಸಿಸಿ ಟ್ವಿನ್ ಎಂಜಿನ್ ನ ಈ ವಾಹನದ ಬೆಲೆ 51 ಲಕ್ಷ ರೂಪಾಯಿ. ಹಾರ್ಲೆ ಮೇಲೆ ಕುಳಿತ ಅವರ ಚಿತ್ರ ವೈರಲ್ ಆಗುತ್ತಿದ್ದಂತೆ, ಮುಖ್ಯ ನ್ಯಾಯಮೂರ್ತಿಗಳಿಗೆ ಬೈಕ್ ಮೇಲೆ ಪ್ರೀತಿ ಎಷ್ಟೆಂಬುದರ ಬಗ್ಗೆ ಚರ್ಚೆಯಾಗಿದೆ.
ಅವರು ಮುಖ್ಯನ್ಯಾಯಮೂರ್ತಿ ಆಗುವ ಮುನ್ನ ನೀಡಿದ ಸಂದರ್ಶನದಲ್ಲಿ ತಮ್ಮ ಬೈಕ್ ಮೇಲಿನ ಪ್ರೀತಿಯನ್ನು ಉಲ್ಲೇಖಿಸಿದ್ದರು. ನಾನು ಬೈಕ್ ಓಡಿಸಲು ಇಷ್ಟಪಡುತ್ತೇವೆ, ನಾನು ಬುಲೆಟ್ ಹೊಂದಿದ್ದೆ ಎಂದು ಹೇಳಿಕೊಂಡಿದ್ದರು.