ಇತ್ತೀಚಿನ ದಿನದಲ್ಲಿ ಆನ್‌ಲೈನ್‌ನಲ್ಲಿ ವಂಚನೆ ಮಾಡುವವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಪ್ರತಿನಿತ್ಯ ಸಾವಿರಾರು ಸಂದೇಶಗಳು ಬರುತ್ತವೆ. ಆದರೆ ಖದೀಮರು ಕಳುಹಿಸುವ ಸಂದೇಶದಲ್ಲಿರುವ ಅಕ್ಷರದೋಷವೇ ಇದು ವಂಚನೆಕೋರರ ಕೆಲಸವೆಂದು ತಿಳಿಯುತ್ತದೆ.
ಇದೀಗ ನಾಗ್ಪುರ ಪೊಲೀಸರು, ವಂಚಕರ ತಪ್ಪು ಗ್ರಾಮರ್ ಹಾಗೂ ಅಕ್ಷರ ದೋಷಗಳನ್ನಿಟ್ಟುಕೊಂಡು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅಕ್ಷರ ದೋಷವಿರುವ ಎಸ್‌ಎಂಎಸ್‌ಗಳ ಸ್ಕ್ರೀನ್ ಶಾಟ್ ತಗೆದು, ತಪ್ಪು ಗ್ರಾಮರ್ ಪ್ರಯೋಗಿಸುವ ನಿಮಗೆ, ಗ್ರಾಮರ್‌ನ ಉಚಿತ ಪಾಠ ಎಂದು ಹೇಳಿದ್ದಾರೆ.
ಮನೆಗೆ ಬಂದು ನಿಮ್ಮನ್ನು ಭೇಟಿಯಾಗಿ ಬಳಿಕ ಲಾಕ್ ಅಪ್‌ನಲ್ಲಿ ಪಾಠ ಮಾಡಲಾಗುವುದು ಎಂದು ಟಾಂಗ್ ಕೊಟ್ಟಿದ್ದಾರೆ. ನಾಗ್ಪುರ ಪೊಲೀಸರ ಈ ಟ್ವೀಟ್ ಇದೀಗ ಭಾರಿ ವೈರಲ್ ಆಗಿದ್ದು, ಅನೇಕರು ಪೊಲೀಸರ ಹಾಸ್ಯ ಪ್ರಜ್ಞೆಯನ್ನು ಪ್ರಶಂಸಿಸುವುದರೊಂದಿಗೆ ತಮಗೆ ಬಂದ ವಂಚಕರ ಸಂದೇಶದ ಪೋಸ್ಟ್ ಹಾಕಿದ್ದಾರೆ.
https://twitter.com/DeeppakKhonde/status/1291812106308739072?ref_src=twsrc%5Etfw%7Ctwcamp%5Etweetembed%7Ctwterm%5E1291812106308739072%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fhome-tutors-available-nagpur-police-offer-grammar-lessons-to-scammers-in-hilarious-twist-2769193.html