ರಾಮಜನ್ಮಭೂಮಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇದೇ ಮೊದಲ ಬಾರಿಗೆ ಹೋಳಿ ಹಬ್ಬವನ್ನ ಆಚರಿಸೋಕೆ ಸಕಲ ಸಿದ್ಧತೆಯನ್ನ ಮಾಡಿಕೊಳ್ಳಲಾಗ್ತಿದೆ.
ಕಳೆದ ಮೂರು ದಶಕಗಳಿಂದ ರಾಮನ ಮೂರ್ತಿ ಟೆಂಟ್ನಲ್ಲೇ ಇದ್ದ ಕಾರಣ ಹೋಳಿ ಹಬ್ಬದಿಂದ ದೂರವಿರಲಾಗಿತ್ತು. ಆದರೆ ಇದೀಗ ಅಯೋಧ್ಯೆಯಲ್ಲಿ ಹೋಳಿ ಸಂಭ್ರಮ ಕಳೆಕಟ್ಟಿದೆ ಎಂದು ರಾಮದೇಗುಲದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ರು.
ರಾಮಮಂದಿರ ಟ್ರಸ್ಟ್ನ ಸದಸ್ಯ ಅನಿಲ್ ಮಿಶ್ರಾ ಕೂಡ ಇದೇ ವಿಚಾರವಾಗಿ ಮಾತನಾಡಿ ಮುಘಲ್ ರಾಜ ಬಾಬರ್ನ ಸೇನಾಪತಿ ಮೀರ್ ಬಾಕಿ 1528ರಲ್ಲಿ ಮಂದಿರದ ಮೇಲೆ ದಾಳಿ ನಡೆಸಿದ್ದ. ಇದಾದ ಬಳಿಕ ಇಲ್ಲಿ ಹೋಳಿ ಸಂಭ್ರಮ ಪಾರಂಪರಿಕ ರೀತಿಯಲ್ಲಿ ಆಚರಿಸಲು ಸಾಧ್ಯವಾಗಿರಲಿಲ್ಲ. ಇದೀಗ ಬರೋಬ್ಬರಿ 500 ವರ್ಷಗಳ ಬಳಿಕ ರಾಮನ ದರ್ಬಾರಿನಲ್ಲಿ ಬಣ್ಣದ ಉತ್ಸವವನ್ನ ಆಚರಿಸಲಾಗುತ್ತೆ. ಇಲ್ಲಿಂದ ಹೊಸ ಯುಗ ಶುರುವಾಗಲಿದೆ ಎಂದು ಹೇಳಿದ್ರು.
ಹೋಳಿ ಹಬ್ಬದ ವಿಶೇಷವಾಗಿ ದೇವಾಲಯವನ್ನ ವಿಶೇಷ ಹೂವುಗಳಿಂದ ಅಲಂಕರಿಸಲಾಗುತ್ತೆ. ದೇಶದ ವಿವಿಧ ಭಾಗಗಳಿಂದ ತರಿಸಲಾದ ಹೂವುಗಳಿಂದ ಅಯೋಧ್ಯೆ ಸಜ್ಜಾಗಲಿದೆ.