![](https://kannadadunia.com/wp-content/uploads/2021/01/128771-fwbfnohxuu-1571844304-1024x538.jpg)
ದೆಹಲಿಯಲ್ಲಿ ನಡೆದ ಶ್ರೀರಾಮ ಜನ್ಮ ಭೂಮಿ ಮಂದಿರ ನಿಧಿ ಸಮರ್ಪಣಾ ಅಭಿಮಾನದಲ್ಲಿ ದಾನಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಕೇಂದ್ರ ಸಚಿವ ಜಾವ್ಡೇಕರ್, 1992 ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ನಿರ್ಮಾಣವಾಗಿದ್ದ ಬಾಬರಿ ಮಸೀದಿಯನ್ನ ನೆಲಸಮ ಮಾಡುವ ಮೂಲಕ ಈ ಐತಿಹಾಸಿಕ ತಪ್ಪನ್ನ ಸರಿಪಡಿಸಲಾಯ್ತು ಎಂದು ಹೇಳಿದ್ರು.
ಕೊರೊನಾ ಮಾರ್ಗಸೂಚಿಯಂತೆಯೇ ನಡೆಯಿತು ಅಂತ್ಯಕ್ರಿಯೆ…. ಆದರೆ 10 ದಿನಗಳ ಬಳಿಕ ನಡೆದಿದ್ದೇ ಬೇರೆ….!
ಬಾಬರ್ನಂತಹ ವಿದೇಶಿ ಆಕ್ರಮಣಕಾರರು ಭಾರತಕ್ಕೆ ಬಂದಾಗ ಅವರು ರಾಮ ಮಂದಿರವನ್ನೇ ನೆಲಸಮ ಮಾಡೋಕೆ ಏಕೆ ಯೋಜನೆ ಹಾಕಿದ್ರು ಗೊತ್ತಾ..? ಏಕೆಂದರೇ ದೇಶದ ಪ್ರತಿಯೊಬ್ಬನ ಆತ್ಮವು ರಾಮ ಮಂದಿರದಲ್ಲಿ ನೆಲೆಸಿದೆ ಅನ್ನೋದು ಅವರಿಗೆ ತಿಳಿದಿತ್ತು. ಹೀಗಾಗಿ ರಾಮ ಮಂದಿರವನ್ನ ನೆಲಸಮ ಮಾಡಿದ್ರು ಎಂದು ಹೇಳಿದ್ದಾರೆ.
ನಾನು ಡಿಸೆಂಬರ್ 6, 1992ರ ಇತಿಹಾಸಕ್ಕೆ ಸಾಕ್ಷಿಯಾಗಿದ್ದೆ, ಆ ಸಮಯದಲ್ಲಿ ನಾನು ಬಿಜೆಪಿ ಯುವ ಮೋರ್ಚಾದಲ್ಲಿ ಕೆಲಸ ಮಾಡುತ್ತಿದ್ದೆ, ನಾನು ಅಯೋಧ್ಯೆಯಲ್ಲಿ ಸೇವಕನಾಗಿದ್ದೆ, ಐತಿಹಾಸಿಕ ತಪ್ಪನ್ನ ಹೇಗೆ ಸರಿಪಡಿಸಲಾಯ್ತು ಅನ್ನೋದನ್ನ ನಾನು ಕಂಡಿದ್ದೇನೆ ಎಂದು ಹೇಳಿದ್ರು.