ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ 32 ವರ್ಷದ ವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಏಳು ಮಂದಿ ಮಹಿಳೆ ಮೇಲೆರಗಿದ್ದಾರೆ. ಕಾರಿನಲ್ಲಿ ಲಿಫ್ಟ್ ನೀಡುವುದಾಗಿ ಹತ್ತಿಸಿಕೊಂಡವರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ಪೀಡಿತೆ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಿಳೆ ಬಸ್ ಗಾಗಿ ನಿಲ್ದಾಣದಲ್ಲಿ ಕಾಯ್ತಿದ್ದಳು ಎನ್ನಲಾಗಿದೆ. ಈ ವೇಳೆ ಅಲ್ಲಿಗೆ ಬಂದ ದುಷ್ಟರು ಲಿಫ್ಟ್ ನೀಡುವ ನೆಪದಲ್ಲಿ ಅತ್ಯಾಚಾರವೆಸಗಿದ್ದಾರೆ.
ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಗೆ ವೈದ್ಯಕೀಯ ಪರೀಕ್ಷೆ ನಡೆದಿದೆ. ಹೊಟೇಲ್ ನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ. ಪೊಲೀಸರು ಹೊಟೇಲ್ ಮಾಲೀಕನನ್ನು ಕೂಡ ಬಂಧಿಸಿದ್ದಾರೆ.