ಹೊಸ ಭಾಷೆಯನ್ನು ಕಲಿಯುವ ಆಲೋಚನೆ ಎಷ್ಟು ಚೆಂದವೂ ಅಷ್ಟೇ ಸವಾಲುಗಳನ್ನೂ ಸಹ ನಮ್ಮ ಮುಂದೆ ಇಡುತ್ತದೆ. ಒಂದಷ್ಟು ಮಟ್ಟಿನ ಸಂಕಲ್ಪದಿಂದ ಹೊಸ ಭಾಷೆಗಳನ್ನು ಆರಾಮವಾಗಿ ಕಲಿಯಬಹುದಾಗಿದೆ.
ಪಂಜಾಬಿ ಭಾಷೆಯನ್ನು ಸರಳವಾಗಿ ಕಲಿಯುವ ಹ್ಯಾಕ್ ಒಂದನ್ನು ಜಸ್ಪ್ರೀತ್ ಬಿಂದ್ರಾ ಎಂಬ ಲೇಖಕರು ತಮ್ಮ ಟ್ವಿಟರ್ ಪ್ರೊಫೈಲ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇಂಗ್ಲಿಷ್‌ನಲ್ಲಿರುವ ಕೆಲ ದಿನಬಳಕೆಯ ಪದಗಳನ್ನು ಪಂಜಾಬಿ ಭಾಷೆಗೆ ಭಾಷಾಂತರ ಮಾಡುವಾಗ ಈ ಟ್ರಿಕ್ ಉಪಯೋಗಕ್ಕೆ ಬರುತ್ತದೆ.
ಕೆಲವೊಂದು ಸಂಖ್ಯೆಗಳನ್ನು ಹಿಂದಿ/ಉರ್ದುವಿನಲ್ಲಿ ಹೇಳುವಾಗ, ಅವು ಪಂಜಾಬಿ ಭಾಷೆಯಲ್ಲಿರುವ ಕೆಲ ದಿನನಿತ್ಯದ ಬಳಕೆಯ ಶಬ್ದಗಳಂತೆ ಭಾಸವಾಗುತ್ತದೆ. ಉದಾಹರಣೆಗೆ, 4 ಅನ್ನು ’ಚಾರ್’ ಎನ್ನುತ್ತೇವೆ. ಉಪ್ಪಿನಕಾಯಿಗೆ ’ಅಚಾರಾ’ ಎಂದು ಪಂಜಾಬಿಯಲ್ಲಿ ಹೇಳುವುದು. ಇದು ’ಚಾರ್’ಗೆ ಬಹಳ ನಿಕಟವಾಗಿದೆ. ಇದೇ ರೀತಿ ಇನ್ನಷ್ಟು ಶಬ್ದಗಳನ್ನು ಕಲಿಯುವ ಹ್ಯಾಕ್ ಅನ್ನು ಈ ಪೋಸ್ಟ್‌ನಿಂದ ಕಲಿಯಬಹುದಾಗಿದೆ.