ದೇಶದಲ್ಲಿ ದ್ವಿಚಕ್ರ ವಾಹನ ಹೊರತುಪಡಿಸಿ ಎಲ್ಲ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿದೆ. ಫಾಸ್ಟ್ ಟ್ಯಾಗ್ ಒಂದು ಕಡೆಯಾದ್ರೆ ಯಮುನಾ ಎಕ್ಸ್ ಪ್ರೆಸ್‌ವೇಯಲ್ಲಿ ಪ್ರಯಾಣಿಸುವವರಿಗೆ ಮತ್ತೊಂದು ಪ್ರಮುಖ ನಿಯಮ ಜಾರಿಗೆ ಬಂದಿದೆ. ಯಮುನಾ ಎಕ್ಸ್ಪ್ರೆಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಮೊಬೈಲ್‌ನಲ್ಲಿ ಹೈವೆ ಸಾಥಿ ಆ್ಯಪ್ ಡೌನ್‌ಲೋಡ್ ಮಾಡುವುದು ಕಡ್ಡಾಯವಾಗಿದೆ.
ಯಮುನಾ ಎಕ್ಸ್ಪ್ರೆಸ್‌ವೇಯಲ್ಲಿ ವಾಹನಗಳನ್ನು ಓಡಿಸಲು ಕಡ್ಡಾಯವಾಗಿರುವ ಹೈವೆ ಸಾಥಿ ಆ್ಯಪ್‌ನ ಉದ್ದೇಶ ಯಮುನಾ ಎಕ್ಸ್ ಪ್ರೆಸ್‌ವೇಯಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವುದಾಗಿದೆ. ಮೊಬೈಲ್‌ನಲ್ಲಿ ಹೈವೆ ಸಾಥಿ ಅಪ್ಲಿಕೇಶನ್ ಹೊಂದಿದ್ದರೆ ಮಾತ್ರ ಯಮುನಾ ಎಕ್ಸ್ ಪ್ರೆಸ್‌ವೇನಲ್ಲಿ ಪ್ರಯಾಣ ಬೆಳೆಸಬಹುದು.
ಯಮುನಾ ಎಕ್ಸ್ ಪ್ರೆಸ್‌ವೇನಲ್ಲಿ ಹೆಚ್ಚಿನ ಅಪಘಾತಕ್ಕೆ ಕಾರಣ ವೇಗ ಮತ್ತು ಮಂಜು. ಅಪಘಾತದ ನಂತರ ಸರಿಯಾದ ಸಮಯದಲ್ಲಿ ಸಹಾಯ ಸಿಗದೆ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಅಪ್ಲಿಕೇಶನ್ ಮೂಲಕ ವಾಹನದ ಪ್ರತಿಯೊಂದು ಚಟುವಟಿಕೆಯ ಬಗ್ಗೆ ಮಾಹಿತಿ ಸರ್ವರ್ ನಲ್ಲಿ ಸಿಗಲಿದೆ. ಚಾಲಕನ ಮೊಬೈಲ್ ಸಂಖ್ಯೆ, ವಾಹನದ ಸಂಖ್ಯೆ, ನಿಯಂತ್ರಣ ಕೊಠಡಿಯಲ್ಲಿರುತ್ತದೆ. ಯಾವುದೇ ಅಪಘಾತ ಸಂಭವಿಸಿದಲ್ಲಿ, ಹೆದ್ದಾರಿ ಪ್ರಾಧಿಕಾರವು ತಕ್ಷಣ ಅಪಘಾತವನ್ನು ಪತ್ತೆ ಮಾಡುತ್ತದೆ. ಹೈವೆ ಸಾಥಿ ಆ್ಯಪ್ ಮೂಲಕ ತಕ್ಷಣ ಸಹಾಯ ಸಿಗುತ್ತದೆ.