ತಮ್ಮ ವಿದ್ಯಾರ್ಥಿ ಜೀವನದ ಫೋಟೋವೊಂದನ್ನು ಶೇರ್ ಮಾಡಿಕೊಂಡಿರುವ ಉದ್ಯಮಿ ರತನ್ ಟಾಟಾ, ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದ ದಿನಗಳನ್ನು ಸ್ಮರಿಸಿದ್ದಾರೆ.
ಮುಂಬೈ ಹಾಗೂ ಶಿಮ್ಲಾದಲ್ಲಿ ವ್ಯಾಸಂಗ ಮಾಡಿದ ಬಳಿಕ ರತನ್ ಟಾಟಾ ನ್ಯೂಯಾರ್ಕ್‌ನ ರಿವರ್‌ಡೇಲ್ ಕಂಟ್ರೀ ಶಾಲೆಯಲ್ಲಿ ಪದವಿ ವ್ಯಾಸಂಗವನ್ನು 1955 ಪೂರೈಸಿದ್ದಾರೆ. ಟಾಟಾ ಸಮೂಹದ ಮುಖ್ಯಸ್ಥರಾದ 82 ವರ್ಷದ ರತನ್ ಟಾಟಾ #ThrowbackThursday ಟ್ರೆಂಡ್‌ನಡಿ ತಮ್ಮದೊಂದು ಹಳೆಯ ಚಿತ್ರವನ್ನು ಶೇರ್ ಮಾಡಿಕೊಂಡಿದ್ದಾರೆ.
“ಭಾರತದಿಂದ ಅಮೆರಿಕಾಗೆ ಬಂದಿರುವ ರತನ್ ಟಾಟಾ, ಬಹಳ ಸ್ನೇಹಜೀವಿಯಾಗಿದ್ದು, ಸಾಕಷ್ಟು ಸ್ನೇಹಿತರನ್ನು ಸಂಪಾದಿಸಿದ್ದಾರೆ. ಅವರು ಇಲ್ಲಿ ಬರೀ ಒಂದೂವರೆ ವರ್ಷದಿಂದ ಇದ್ದರೂ ಸಹ, ಅಮೆರಿಕನ್ನರಂತೆಯೇ ಆಗಿಬಿಟ್ಟಿದ್ದಾರೆ” ಎಂದು ಈ ಹೊತ್ತಿಗೆ ರತನ್ ಟಾಟಾ ಬಗ್ಗೆ ಪರಿಚಯ ಮಾಡಿಕೊಡುತ್ತಿದೆ.
ಇಂಜಿನಿಯರ್ ಆಗುವ ಆಸೆ ಇಟ್ಟುಕೊಂಡಿದ್ದ ರತನ್ ಟಾಟಾ ಶಾಲಾದಿನಗಳಲ್ಲಿ ಬೇಸ್‌ಬಾಲ್ ಅನ್ನೂ ಆಡುತ್ತಿದ್ದರು. ಭಾರತದ ಶಾಲೆಗಳಿಗಿಂತ ರಿವರ್‌ಡೇಲ್ ಬಹಳ ಕಷ್ಟಕರವೆನಿಸುತ್ತಿತ್ತು ಎಂದು ಖುದ್ದು ಅವರೇ ಹೇಳಿಕೊಂಡಿದ್ದಾರೆ.
https://www.instagram.com/p/CGFXUbmnmM-/?utm_source=ig_web_copy_link