ಕೋವಿಡ್ ಕಾಲಘಟ್ಟದಲ್ಲಿ ಕರ್ಫ್ಯೂ, ಲಾಕ್ ಡೌನ್ ಜಾರಿಯಲ್ಲಿದೆ. ಈ ವೇಳೆ ಮನೆಯಲ್ಲಿ ಹಸಿದು ಕುಳಿತ ಅದೆಷ್ಟೋ ಹೊಟ್ಟೆಗಳನ್ನು ತಣ್ಣಗೆ ಮಾಡುತ್ತಿರುವುದು ಫುಡ್ ಡೆಲವರಿ ಬಾಯ್ಸ್‌ಗಳು.
ಈ ಫುಡ್ ಡೆಲವರಿ ಬಾಯ್‌ಗಳ ಕರ್ತವ್ಯ ನಿಷ್ಠೆಯ ಕುರಿತ ಜಾಲತಾಣದ ಪೋಸ್ಟ್ ನೆಟ್ಟಿಗರ ಮನ ಗೆದ್ದಿದೆ. ಕೋಲ್ಕತ್ತಾದ ಡೊಮಿನೊಸ್ ಡೆಲಿವರಿ ಮ್ಯಾನ್ ಗ್ರಾಹಕರಿಗೆ ಪಿಜ್ಜಾ ನೀಡಲು ಮಳೆಯ ನಡುವೆ ಕರ್ತವ್ಯ ಮೆರೆದ ಫೋಟೋ ಪ್ರಕಟಿಸಿದೆ.
ಇನ್ಸ್ಟಾಗ್ರಾಂನಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಲು ಹೋದ ಮಹಿಳೆ ಜೈಲುಪಾಲು..!
ಶೋವನ್ ಘೋಷ್ ಎಂಬ ಡೆಲವರಿ ಬಾಯ್ ಫೋಟೋವನ್ನು ಡೊಮಿನೊಸ್ ಹಂಚಿಕೊಂಡಿದೆ. ಆತ ರಸ್ತೆಯಲ್ಲಿ ಮೊಣಕಾಲು ಉದ್ದ ನೀರಿದ್ದರೂ ಪಿಜ್ಜಾವನ್ನು ಗ್ರಾಹಕರ ಮನೆಗೆ ತಲುಪಿಸುತ್ತಿದ್ದಾರೆ.
ಅವರನ್ನು ‘ಫುಡ್ ಸೋಲ್ಜರ್’ ಎಂದು ಕರೆದಿದ್ದು, ಸಮಯಕ್ಕೆ ಗ್ರಾಹಕರಿಗೆ ತಲುಪಿಸಿದ್ದಕ್ಕಾಗಿ ಮತ್ತು ಸವಾಲನ್ನು ಎದುರಿಸಿದ್ದಕ್ಕೆ ಶ್ಲಾಘಿಸಲಾಗಿದೆ. ನೆಟ್ಟಿಗರು ಫುಡ್ ಡೆಲವರಿ ಬಾಯ್ ಕರ್ತವ್ಯ ಪ್ರಜ್ಞೆಯನ್ನು ಹಾಡಿಹೊಗಳಿದ್ದಾರೆ.