ಕೊರೊನಾ ಎರಡನೆ ಅಲೆಯ ವಿರುದ್ಧ ದೇಶದ ಹೋರಾಟ ಮುಂದುವರಿದಿದೆ. ವೈದ್ಯಕೀಯ ಲೋಕ ಅನೇಕ ಸಂಕಷ್ಟಗಳ ನಡುವೆಯೇ ಸೋಂಕಿತರ ಜೀವ ಉಳಿಸಲು ಇನ್ನಿಲ್ಲದ ಯತ್ನ ಮಾಡುತ್ತಿದೆ. ಆಕ್ಸಿಜನ್ ಕೊರತೆ, ಔಷಧಿ ಸಾಮಗ್ರಿ ಕೊರತೆ, ಬೆಡ್ ಕೊರತೆಯು ಕೊರೊನಾ ವಿರುದ್ಧದ ಹೋರಾಟದಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಕೊರೊನಾ ಸೋಂಕು ಉಲ್ಬಣವಾಗುತ್ತಿದ್ದಂತೆಯೇ ರೆಮ್ಡಿಸಿವರ್ ಚುಚ್ಚುಮದ್ದಿಗೂ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ರೆಮ್ಡಿಸಿವರ್ ಪೂರೈಕೆಯಲ್ಲಿಯೂ ಕೊರತೆ ಉಂಟಾಗಿದೆ. ಈ ಪರಿಸ್ಥಿತಿಯ ಲಾಭ ಪಡೆದ ಅನೇಕರು ನಕಲಿ ರೆಮಿಡಿಸಿವರ್ನ್ನು ಮಾರುಕಟ್ಟೆಗೆ ಬಿಟ್ಟಿದ್ದಾರೆ.
ಹೀಗಾಗಿ ರೆಮಿಡಿಸಿವರ್ ಚುಚ್ಚುಮದ್ದನ್ನ ಖರೀದಿ ಮಾಡುವ ಮುನ್ನ ನೀವು ಇಂತಹ ದುಷ್ಕರ್ಮಿಗಳ ಆಟದಿಂದ ದೂರವಿರಬೇಕಾದ ಅವಶ್ಯಕತೆ ಇದೆ.
ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ ಹಾಗೂ ಮಧ್ಯ ಪ್ರದೇಶಗಳಲ್ಲಿ ನಕಲಿ ರೆಮಿಡಿಸಿವರ್ ಮಾರಾಟ ಮಾಡುತ್ತಿದ್ದವರನ್ನ ಬಂಧಿಸಲಾಗಿದೆ.
ದೆಹಲಿ ಕ್ರೈಂ ಬ್ರ್ಯಾಂಚ್ನ ಡಿಸಿಪಿ ಮೋನಿಕಾ ಭಾರದ್ವಾಜ್, ಟ್ವಿಟರ್ನಲ್ಲಿ ನಕಲಿ ರೆಮಿಡಿಸಿವರ್ ಹಾಗೂ ಅಸಲಿ ರೆಮಿಡಿಸಿವರ್ಗೆ ಇರುವ ವ್ಯತ್ಯಾಸಗಳ ಕುರಿತು ಮಾಹಿತಿ ನೀಡಿದ್ದಾರೆ.
ನಕಲಿ ರೆಮಿಡಿಸಿವರ್ ಪ್ಯಾಕೇಜ್ಗಳಲ್ಲಿ ನಿಮಗೆ ರೆಮಿಡಿಸಿವರ್ ಎಂಬ ಹೆಸರಿನ ಜೊತೆಯಲ್ಲಿ Rx ಎಂದು ಬರೆದಿರೋದಿಲ್ಲ.
ಅಸಲಿ ರೆಮಿಡಿಸಿವರ್ನಲ್ಲಿ “100 mg/Vial” ಎಂದು ಬರೆಯಲಾಗಿದ್ದರೆ ನಕಲಿ ರೆಮಿಡಿಸಿವರ್ನಲ್ಲಿ “100 mg/vial” ಎಂದು ಬರೆಯಲಾಗಿರುತ್ತೆ. ಗಮನಿಸಿ ಇಲ್ಲಿ ವಿ ಅಕ್ಷರವು ಅಸಲಿ ರೆಮಿಡಿಸಿವರ್ನಲ್ಲಿ ಕ್ಯಾಪಿಟಲ್ ಅಕ್ಷರವಾಗಿಯೂ ನಕಲಿ ರೆಮಿಡಿಸಿವರ್ನಲ್ಲಿ ಸ್ಮಾಲ್ ಅಕ್ಷರದಲ್ಲಿಯೂ ಇರಲಿದೆ.
ಬ್ರ್ಯಾಂಡ್ ಹೆಸರಿನಲ್ಲಿಯೂ ವ್ಯತ್ಯಾಸವನ್ನ ಕಾಣಬಹುದಾಗಿದೆ. ಅಸಲಿ ರೆಮಿಡಿಸಿವರ್ಗಿಂತ ನಕಲಿ ರೆಮಿಡಿಸಿವರ್ ಪ್ಯಾಕೇಜ್ನಲ್ಲಿ ಬ್ರ್ಯಾಂಡ್ನ ಹೆಸರು ಬರೆದಲ್ಲಿ ಅಕ್ಷರಗಳ ನಡುವೆ ಅಂತರ ಹೆಚ್ಚಿರಲಿದೆ.
ಅಸಲಿ ರೆಮಿಡಿಸಿವರ್ ಪ್ಯಾಕೇಜ್ನ ಅಡಿಬದಿಯಲ್ಲಿ For use in ಎಂದು ಬರೆಯಲಾಗಿದ್ದರೆ ನಕಲಿ ರೆಮಿಡಿಸಿವರ್ನಲ್ಲಿ for use in ಎಂದು ಬರೆಯಲಾಗಿದೆ.
ಇನ್ನು ಅಸಲಿ ರೆಮಿಡಿಸಿವರ್ನಲ್ಲಿ ಕೆಂಪು ಬಣ್ಣದಲ್ಲಿ ವಾರ್ನಿಂಗ್ ಎಂದು ಬರೆಯಲಾಗಿದ್ದರೆ ನಕಲಿ ರೆಮಿಡಿಸಿವರ್ನಲ್ಲಿ ಕಪ್ಪು ಬಣ್ಣದಲ್ಲಿ ಇರಲಿದೆ.
ಅಸಲಿ ರೆಮಿಡಿಸಿವರ್ನಲ್ಲಿ ಇಂಡಿಯಾ ಎಂಬ ಪದದಲ್ಲಿ ಐ ಕ್ಯಾಪಿಟಲ್ ಆಗಿದ್ದರೆ ನಕಲಿ ರೆಮಿಡಿಸಿವರ್ನಲ್ಲಿ ಐ ಸ್ಮಾಲ್ ಆಗಿದೆ.
ಇನ್ನು ನಕಲಿ ರೆಮಿಡಿಸಿವರ್ನಲ್ಲಿ ತೆಲಂಗಾಣ ಎಂದು ಬರೆಯುವ ಬದಲು ತೆಲಗಾಣ ಎಂದು ಬರೆಯಲಾಗಿದೆ.