ಕೊರೊನಾ ವೈರಸ್‌ನ ಮತ್ತೊಂದು ಅಲೆ ಭಾರತಕ್ಕೆ ಅಪ್ಪಳಿಸುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆ ಎಲ್ಲೆಡೆ ಹುಟ್ಟಿಕೊಂಡಿದೆ.
ಭಾರತದಲ್ಲಿ ಸದ್ಯ 2,19,262ರಷ್ಟು ಸಕ್ರಿಯ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರ, ಕೇರಳ ಹಾಗೂ ಪಂಜಾಬ್‌ಗಳಲ್ಲಿ ದೇಶದ ಸಕ್ರಿಯ ಕೋವಿಡ್-19 ಪ್ರಕರಣಗಳ ಶೇ.77ರಷ್ಟು ದಾಖಲಾಗಿವೆ. ಹೀಗಾಗಿ ನಾವೆಲ್ ಕೊರೊನಾ ವೈರಸ್‌ನ ಎರಡನೇ ಅಲೆ ಎದ್ದೇಳುವ ಸಾಧ್ಯತೆ ನಮ್ಮ ಮುಂದೆ ಇದೆ.
ಮಹಾರಾಷ್ಟ್ರದ ನಾಗ್ಪುರ ಕೋವಿಡ್‌ನ ಎರಡನೇ ಅಲೆಗೆ ಲಾಕ್‌ಡೌನ್ ಆಗಿರುವ ದೇಶದ ಮೊದಲ ನಗರವಾಗಿದೆ. ನಾಗ್ಪುರದಲ್ಲಿ ಒಂದು ವಾರದ ಮಟ್ಟಿಗೆ ಲಾಕ್‌ಡೌನ್ ಇರಲಿದೆ. ಮಿಕ್ಕಂತೆ ಪುಣೆ ಹಾಗೂ ನಾಸಿಕ್‌ಗಳಲ್ಲೂ ಸಹ ರಾತ್ರಿ ವೇಳೆ ಲಾಕ್‌ಡೌನ್ ಇರಲಿದೆ.
ಇಂದೂ ಕೊರೋನಾ ಭಾರೀ ಸ್ಪೋಟ, 1275 ಜನರಿಗೆ ಸೋಂಕು -10220 ಸಕ್ರಿಯ ಪ್ರಕರಣ
ಉತ್ತರಾಖಂಡದ ಮಸ್ಸೂರಿಯಲ್ಲಿ ಸಂಪೂರ್ಣ ಲಾಕ್‌ಡೌನ್ ಇರಲಿದೆ. ಪಂಜಾಬ್‌ನ ಮೊಹಾಲಿ, ಲೂಧಿಯಾನಾ ಹಾಗೂ ಪಟಿಯಾಲಗಳಲ್ಲಿ ಇರುಳು ಲಾಕ್‌ಡೌನ್ ಇರಲಿದೆ.
ಗುಜರಾತ್‌ನ ಅಹಮದಾಬಾದ್, ಸೂರತ್, ವಡೋದರಾ ಹಾಗೂ ರಾಜ್‌ಕೋಟ್‌ಗಳಲ್ಲಿ ರಾತ್ರಿ 12 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೂ ಕರ್ಫ್ಯೂ ಇರಲಿದೆ.