ನಮಗಾಗದವರಿಗೆ “ಗೂಬೆ” ಎಂದು ಜರಿಯುವುದಿದೆ. ರಾತ್ರಿ ಕೂಗುತ್ತ ಕೂರುವ ಗೂಬೆಯನ್ನು ತುಚ್ಛ ಪಕ್ಷಿ ಎಂಬಂತೆ ಮಾನವ ಸಮಾಜ ಬಿಂಬಿಸಿದೆ. ಆದರೆ, ಇಲ್ಲೊಬ್ಬ ವ್ಯಕ್ತಿ ಗಾಯಗೊಂಡ ಗೂಬೆಯನ್ನು ರಕ್ಷಿಸಿ ಅದಕ್ಕೆ ಚಿಕ್ಕ ಮಗುವಿನಂತೆ ಸ್ಪೂನ್ ಫೀಡಿಂಗ್ ಮಾಡುವ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.
ಐಎಫ್ಎಸ್ ಅಧಿಕಾರಿ ಪ್ರವೀಣ್ ಕಾಸ್ವಾನ್ 1.33 ನಿಮಿಷಗಳ ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. “ಈ ವಿಡಿಯೋ ನಿಮ್ಮ ಮುಖದಲ್ಲಿ ನಗು ತರುತ್ತದೆ” ಎಂದು ಕ್ಯಾಪ್ಶನ್ ನೀಡಿದ್ದಾರೆ.
ಮನೆಯಾಗಿ ಬದಲಾಯ್ತು ಡಬಲ್ ಡೆಕ್ಕರ್ ಬಸ್….?
ವಿಡಿಯೋವನ್ನು 30 ಸಾವಿರ ಜನ ವೀಕ್ಷಿಸಿದ್ದಲ್ಲದೆ, ಈ ಕೆಲಸ ಮಾಡಿದ ಸರ್ಕಾರಿ ಶಿಕ್ಷಕನ ಹೃದಯ ವೈಶಾಲ್ಯವನ್ನು ಕೊಂಡಾಡಿದ್ದಾರೆ. ತರಹೇವಾರಿ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ.
ಸರ್ಕಾರಿ ಶಿಕ್ಷಕ ದೀನಬಂಧು ಬಾಬು ಈ ಕಾರ್ಯ ಮಾಡಿದ ವ್ಯಕ್ತಿಯಾಗಿದ್ದಾರೆ. ಅವರು ಗಾಯಗೊಂಡ ಆಮೆ, ಹಾವು ಮುಂತಾದ ಪ್ರಾಣಿಗಳನ್ನೂ ರಕ್ಷಿಸುವ ಪರಿಸರ ಕಾರ್ಯಕರ್ತರು ಎಂದು ಪ್ರವೀಣ್ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
https://twitter.com/ParveenKaswan/status/1363096769576452104?ref_src=twsrc%5Etfw%7Ctwcamp%5Etweetembed%7Ctwterm%5E1363096769576452104%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Fwatch-heartwarming-rescue-of-injured-owl-leaves-netizens-emotional-7198073%2F