alex Certify ಕಣ್ಣಂಚನ್ನು ತೇವಗೊಳಿಸುತ್ತೆ ವೈದ್ಯಕೀಯ ಸಿಬ್ಬಂದಿಯ ಮನ ಕಲಕುವ ಕಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಂಚನ್ನು ತೇವಗೊಳಿಸುತ್ತೆ ವೈದ್ಯಕೀಯ ಸಿಬ್ಬಂದಿಯ ಮನ ಕಲಕುವ ಕಥೆ

ವಿಶ್ವದಲ್ಲಿ ಕೊರೊನಾ ವೈರಸ್​ ಸಾಂಕ್ರಾಮಿಕ ಮಿತಿಮೀರುತ್ತಲೇ ಇದ್ದು ಕಳೆದ ವರ್ಷದ ಆರಂಭದಿಂದಲೂ ಆರೋಗ್ಯ ಸಿಬ್ಬಂದಿ ಸೋಂಕಿನಿಂದ ಜನರನ್ನ ರಕ್ಷಿಸೋಕೆ ಇನ್ನಿಲ್ಲದ ಶ್ರಮವನ್ನ ವಹಿಸುತ್ತಲೇ ಇದ್ದಾರೆ. ಕುಟುಂಬದಿಂದ ದೂರ ಉಳಿದು, ದಿನವಿಡಿ ಕೆಲಸ ಮಾಡುತ್ತಾ, ಶೌಚಾಲಯಕ್ಕೂ ಹೋಗಲು ಆಗದೇ ಕಷ್ಟಪಡುವ ವೈದ್ಯಕೀಯ ಸಿಬ್ಬಂದಿಯ ಪಾಡು ಹೇಳತೀರದು.

ಆರೋಗ್ಯ ಸಲಹೆಗಾರ್ತಿಯಾಗಿರುವ ವಂದನಾ ಮಹಾಜನ್​ ಕೊರೊನಾ ಸೋಂಕಿಗೆ ಒಳಗಾಗಿರೋದ್ರಿಂದ ಒಂದು ವಾರಕ್ಕೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಕಳೆದಿದ್ದಾರೆ. ಆಸ್ಪತ್ರೆಯಲ್ಲಿ ಇದ್ದ ವೇಳೆ ಅವರು ವೈದ್ಯರು, ನರ್ಸ್​ ಹಾಗೂ ಇತರೆ ವೈದ್ಯಕೀಯ ಸಿಬ್ಬಂದಿಯ ಹೋರಾಟವನ್ನ ಕಣ್ಣಾರೆ ಕಂಡಿದ್ದಾರೆ. ಇವರು ಪಿಪಿಇ ಕಿಟ್​ ಧರಿಸಿ ಖುರ್ಚಿಯ ಮೇಲೆ ಕೂತು ವಿಶ್ರಾಂತಿ ಪಡೆಯುತ್ತಿದ್ದ ನರ್ಸ್ ಒಬ್ಬರ ಫೋಟೋ ಶೇರ್​ ಮಾಡಿದ್ದು ಈ ಫೋಟೋ ನೋಡಿದ ನೆಟ್ಟಿಗರ ಕಣ್ಣಂಚಲ್ಲಿ ನೀರು ಜಿನುಗಿದೆ.

ಈ ವೈರಸ್​ನ ವಿರುದ್ಧ ಹೋರಾಡುತ್ತಿರುವ ವೈದ್ಯರ ಕಷ್ಟವನ್ನ ನಾನು ಕಣ್ಣಾರೆ ಕಂಡಿದ್ದಾನೆ. ನಾನು ಸಿಸ್ಟರ್ಸ್, ಕೆಲಸದವರು, ವೈದ್ಯರ ಜೊತೆ ಮಾತನಾಡಿದ್ದೇನೆ ಎಂದು ಮಹಾಜನ್​ ಹೇಳಿದ್ರು. ನರ್ಸ್ ಒಬ್ಬರು ಕೊರೊನಾ ದೇಶಕ್ಕೆ ಬಂದಾಗಿನಿಂದ ನಾನು ಸೇವೆ ಸಲ್ಲಿಸುತ್ತಲೇ ಇದ್ದೇನೆ ಎಂದು ಹೇಳಿದ್ದಾರೆ. ಆಕೆ ಹಾಸ್ಟೆಲ್​ನಲ್ಲಿ ವಾಸವಿದ್ದಾರೆ. ತಮ್ಮ ಮಗನನ್ನ ಪೋಷಕರ ಜೊತೆ ಇರಿಸಿದ್ದಾರೆ. ನಾಲ್ಕು ವರ್ಷಗಳ ಬಳಿಕ ಆಕೆಯ ಪತಿ ಮನೆಗೆ ವಾಪಸ್ಸಾಗಿದ್ದಾರೆ. ಆದರೆ ಈಕೆಗೆ ಪತಿಯನ್ನೂ ಮಾತನಾಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ರು.

ಕುಡಿಯಲು ನೀರು ತಂದುಕೊಟ್ಟ ವೈದ್ಯಕೀಯ ಸಿಬ್ಬಂದಿಗೆ ಮಹಾಜನ್​ ಧನ್ಯವಾದ ಅರ್ಪಿಸುತ್ತಿದ್ದಂತೆಯೇ ಆಕೆ ನನಗೆ ಇದುವರೆಗೆ ಯಾರೂ ಈ ರೀತಿ ಹೇಳಿರಲಿಲ್ಲ ಎಂದು ಭಾವುಕರಾದ್ರು.

ಇನ್ನೊಬ್ಬ ದಾದಿ ನಿರಂತರ ಶಿಫ್ಟ್​ನಿಂದಾಗಿ ಹೊಟ್ಟೆ ನೋವು, ಬಾಯಿ ಹುಣ್ಣಿನಿಂದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪಿಪಿಇ ಕಿಟ್​ ಹಾಕಿಕೊಂಡ ನರ್ಸ್​ಗೆ ಸ್ಯಾನಿಟರಿ ಪ್ಯಾಡ್​ ಬದಲಾಯಿಸೋಕೂ ಆಗೋದಿಲ್ಲವಂತೆ..!

ವೈದ್ಯಕೀಯ ಸಿಬ್ಬಂದಿಯ ಯಮಯಾತನೆಗಳ ಬಗ್ಗೆ ಬೆಳಕು ಚೆಲ್ಲುವಂತೆ ಇರುವ ಮಹಾಜನ್​ರ ಈ ಪೋಸ್ಟ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ನೆಟ್ಟಿಗರು ವೈದ್ಯಕೀಯ ಸಿಬ್ಬಂದಿಗೆ ಮಾನಸಿಕ ಆರೋಗ್ಯ ತಪಾಸಣೆಯ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

— Vandana Mahajan (@oceanblue11oct) April 15, 2021

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...