ಅಪರೂಪದ ವೈದ್ಯಕೀಯ ಪ್ರಕರಣವೊಂದರಲ್ಲಿ, ಗೋವಾ ವೈದ್ಯಕೀಯ ಕಾಲೇಜೊಂದರ ವೈದ್ಯರು 50 ವರ್ಷ ವಯಸ್ಸಿನ ರೋಗಿಯೊಬ್ಬರ ದೇಹದಲ್ಲಿ ’ಕಲ್ಲಿನ ಹೃದಯ’ವೊಂದನ್ನು ಪತ್ತೆ ಮಾಡಿದ್ದಾರೆ.
ಹೃದಯದ ಅಂಗಾಂಶದಲ್ಲಿ ಕ್ಯಾಲ್ಸಿಫಿಕೇಶನ್ ಆದ ಕಾರಣ ಅವರ ಹೃದಯವು ಕಲ್ಲಾಗಿದೆ. ರೋಗಿಯ ಹೃದಯದ ಎಡ ರಕ್ತನಾಳದಲ್ಲಿ ಭಾರೀ ಎಂಡೋಕ್ರೈನಲ್ ಕ್ಯಾಲ್ಸಿಫಿಕೇಶನ್ ಕಂಡು ಬಂದಿದೆ. ಈ ಪರಿಸ್ಥಿತಿಯಲ್ಲಿರುವ ರೋಗಿಯ ರಕ್ತನಾಳಗಳಲ್ಲಿನ ರಕ್ತದ ಹರಿವು ಸಮರ್ಪಕವಾಗಿ ಆಗುವುದಿಲ್ಲ.
ಗೋವಾ ವೈದ್ಯಕೀಯ ಕಾಲೇಜಿನಲ್ಲಿ ಎರಡನೇ ವರ್ಷದ ಪಿಜಿ ವ್ಯಾಸಂಗ ಮಾಡುತ್ತಿರುವ ಡಾ. ಭರತ್ ಶ್ರೀಕುಮಾರ್ ಅವರು ಈ ರೋಗಿಯ ಮರಣೋತ್ತರ ಪರೀಕ್ಷೆಯನ್ನು ಕಳೆದ ಜುಲೈನಲ್ಲಿ ಮಾಡಿದ್ದರು. ದಕ್ಷಿಣ ಗೋವಾದ ಉದ್ಯಾನವೊಂದರಲ್ಲಿ ಮೃತ ಸ್ಥಿತಿಯಲ್ಲಿ ಸಿಕ್ಕ ಈ ವ್ಯಕ್ತಿ ಯಾರೆಂದು ತಿಳಿದು ಬಂದಿಲ್ಲ.
ಮಾರಾಟಕ್ಕಿದೆ ನ್ಯೂಯಾರ್ಕ್ ನ ಈ 3ಡಿ ಪ್ರಿಂಟೆಡ್ ಮನೆ…!
“ಹೃದಯವು ಕಲ್ಲಿನಲ್ಲಿ ಸೃಷ್ಟಿಸಿದಷ್ಟು ಗಟ್ಟಿಯಾಗಿತ್ತು. ಈ ಅಪರೂಪದ ಆವಿಷ್ಕಾರವನ್ನು ಇಲಾಖೆಯಲ್ಲಿರುವ ಹಿರಿಯ ವೈದ್ಯರಿಗೆ ತೋರಿದ ಬಳಿಕ ಅವರು ನನಗೆ ಹಿಸ್ಟೋಪ್ಯಾಥಾಲಜಿಕಲ್ ಅಧ್ಯಯನ ಮಾಡಲು ಸೂಚಿಸಿದರು” ಎಂದು ಶ್ರೀಕುಮಾರ್ ಹೇಳಿದ್ದಾರೆ.
ರೋಗವೊಂದು ಯಾವೆಲ್ಲಾ ರೂಪದಲ್ಲಿ ಮೈದಳೆದಿದೆ ಎಂದು ಅಧ್ಯಯನ ಮಾಡಲು ಸೂಕ್ಷ್ಮದರ್ಶಕ ಬಳಸಿ ನೋಡುವುದನ್ನು ಹಿಸ್ಟೋಪ್ಯಾಥಾಲಜಿ ಎನ್ನಲಾಗುತ್ತದೆ. ಇಂಥದ್ದೇ ಪರಿಸ್ಥಿತಿಯಲ್ಲಿ ಕಿಡ್ನಿಯಲ್ಲಿ ಕಲ್ಲುಗಳು ಸೃಷ್ಟಿಯಾಗುತ್ತವೆ. ಫೈಬ್ರೋಸಿಸ್ ಕಾರಣದಿಂದ ಅಂಗಾಂಶಗಳು ಗಟ್ಟಿಯಾಗುತ್ತವೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.