ಕೋವಿಡ್-19 ಸಾಂಕ್ರಮಿಕದ ವಿರುದ್ಧ ಲಸಿಕೆಯ ಸಂಶೋಧನೆಯ ಅಂತಿಮ ಹಂತ ಚಾಲನೆಯಲ್ಲಿ ಇರುವಂತೆಯೇ ಎಲ್ಲೆಡೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ದೇಶದ ಪ್ರತಿಯೊಬ್ಬನಿಗೂ ಈ ಲಸಿಕೆ ಕೊಡಿಸಲು 80 ಸಾವಿರ ಕೋಟಿ ರೂ.ಗಳ ದೊಡ್ಡದೊಂದು ಪ್ಲಾನ್ ನಡೆಯುತ್ತಿದೆ ಎಂಬ ವರದಿಗಳು ಸದ್ದು ಮಾಡುತ್ತಿವೆ.
ಇದೇ ವೇಳೆ, ದೇಶದ ಆರೋಗ್ಯವಂತ ವಯಸ್ಕರು ತಾವೂ ಸಹ ಚುಚ್ಚುಮದ್ದನ್ನು ಪಡೆಯಲು 2022ರವರೆಗೂ ಕಾಯಬೇಕು ಎಂದು ಏಮ್ಸ್ ನಿದೇರ್ಶಕ ಡಾ. ರಣ್‌ದೀಪ್ ಗುಲೇರಿಯಾ ಹಾಗೂ ಲಸಿಕೆಯ ಸಂಶೋಧಕರಾದ ವೈರಾಲಜಿಸ್ಟ್ ಡಾ. ಗಗನ್‌ದೀಪ್ ಕಂಗ್ ಹಾಗೂ ಆರೋಗ್ಯ ವ್ಯವಸ್ಥೆಯ ತಜ್ಞ ಡಾ. ಚಂದ್ರಕಾಂತ್ ಲಹರಿಯಾ ಬರೆದಿರುವ, ‘Till We Win: India’s Fight Against The Covid-19 Pandemic’ ಪುಸ್ತಕದಲ್ಲಿ ಈ ವಿಚಾರ ತಿಳಿಸಿದ್ದಾರೆ.
2021ರ ಆರಂಭದಲ್ಲಿ ಕೋವಿಡ್-19 ನಿರೋಧಕ ಲಸಿಕೆ ಬರಲಿದೆ ಎಂದು ಅಗ್ರ ತಜ್ಞರು ಹೇಳಿರುವುದನ್ನು ಈ ಪುಸ್ತಕದಲ್ಲಿ ಇನ್ನಷ್ಟು ಪುಷ್ಟೀಕರಿಸಿ ಬರೆಯಲಾಗಿದೆ.
ಲಸಿಕೆ ಕಾರ್ಯಕ್ರಮದ ಮೊದಲ ಹಂತದಲ್ಲಿ ಭಾರತದ ಜನಸಂಖ್ಯೆಯ 20ರಷ್ಟು ಜನರಿಗೆ ಚುಚ್ಚುಮದ್ದು ಕೊಡಲಾಗುವುದು ಎಂದು ಪುಸ್ತಕದ ಸಹ-ಲೇಖಕರಾದ ಡಾ. ಗಗನ್‌ದೀಪ್ ತಿಳಿಸಿದ್ದು, ವಯಸ್ಕರು ಹಾಗೂ ಇತರ ಕಾಯಿಲೆಗಳಿರುವ ಮಂದಿಗೆ ಆದ್ಯತೆ ಮೇಲೆ ಲಸಿಕೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.
ಆಕ್ಸ್‌ಫರ್ಡ್ ವಿವಿ ಹಾಗೂ ಅಸ್ಟ್ರಾಝೆನೆಕಾ ಜೊತೆಯಾಗಿ ಅಭಿವೃದ್ಧಿ ಪಡಿಸುತ್ತಿರುವ ಕೊರೋನಾ ವೈರಸ್ ಲಸಿಕೆ ತಮ್ಮ ಪ್ರಯೋಗದ ವರದಿಯನ್ನು ಕೊಡಲಿವೆ ಎಂದು ಪುಸ್ತಕದಲ್ಲಿ ತಿಳಿಸಲಾಗಿದೆ.