ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಅನಿವಾರ್ಯ. ಆದ್ರೆ ಕಾರಿನಲ್ಲಿ ಒಬ್ಬರೇ ಪ್ರಯಾಣ ಬೆಳೆಸ್ತಿದ್ದರೆ ಮಾಸ್ಕ್ ಧರಿಸಬೇಕಾಗಿಲ್ಲ. ಈ ಬಗ್ಗೆ ಯಾವುದೇ ಲಿಖಿತ ಆದೇಶವಿಲ್ಲ. ಹಾಗಾಗಿ ಪೊಲೀಸರು ಅನೇಕ ಕಡೆ ಮಾಸ್ಕ್ ಧರಿಸದೆ ಕಾರ್ ಚಲಾಯಿಸುವ ವ್ಯಕ್ತಿಗೆ ದಂಡ ವಿಧಿಸುತ್ತಿದ್ದಾರೆ.
ಈ ಬಗ್ಗೆ ಬೇರೆ ಬೇರೆ ರಾಜ್ಯಗಳಿಂದ ಅನೇಕ ದೂರುಗಳು ಬಂದಿವೆ. ದೂರಿನ ನಂತ್ರ ಆರೋಗ್ಯ ಸಚಿವಾಲಯ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದರೆ ಮಾಸ್ಕ್ ಕಡ್ಡಾಯವಲ್ಲ. ಹಾಗೆ ಏಕಾಂಗಿಯಾಗಿ ಸೈಕ್ಲಿಂಗ್ ಮಾಡ್ತಿದ್ದರೆ ಆತನಿಗೂ ದಂಡ ವಿಧಿಸುವಂತಿಲ್ಲ.
ಒಂದು ವೇಳೆ ಕಾರಿನಲ್ಲಿ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಪ್ರಯಾಣ ಬೆಳೆಸುತ್ತಿದ್ದರೆ ಮಾಸ್ಕ್ ಕಡ್ಡಾಯ. ಗುಂಪಿನಲ್ಲಿ ಸೈಕ್ಲಿಂಗ್ ಮಾಡ್ತಿದ್ದರೆ ಅವರಿಗೂ ಮಾಸ್ಕ್ ಕಡ್ಡಾಯವೆಂದು ಆರೋಗ್ಯ ಸಚಿವಾಲಯ ಹೇಳಿದೆ.
ದೆಹಲಿಯಲ್ಲಿ ದಂಡದ ಪ್ರಕರಣ ಹೆಚ್ಚಾಗಿದೆ. ಏಕಾಂಗಿಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದು, ಮಾಸ್ಕ್ ಧರಿಸದೆ ಹೋದಲ್ಲಿ 500ರಿಂದ ಸಾವಿರ ರೂಪಾಯಿ ದಂಡ ವಿಧಿಸಲಾಗ್ತಿದೆ. ಈ ಬಗ್ಗೆ ಸಾರ್ವಜನಿಕರು ಅನೇಕ ಬಾರಿ ಪೊಲೀಸರಿಗೆ ದೂರು ನೀಡಿದ್ದರು. ಗುರುವಾರ ಆರೋಗ್ಯ ಸಚಿವಾಲಯ ಸ್ಪಷ್ಟ ಮಾಹಿತಿ ನೀಡಿದ್ದು, ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದು, ಮಾಸ್ಕ್ ಧರಿಸದೆ ಹೋದ್ರೆ ಅಂತ ವ್ಯಕ್ತಿಗೆ ದಂಡ ವಿಧಿಸುವಂತಿಲ್ಲ.