
ನವದೆಹಲಿ: ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ರಾಷ್ಟ್ರೀಯ ಡಿಜಿಟಲ್ ಹೆಲ್ತ್ ಮಿಷನ್ ಯೋಜನೆ ಘೋಷಿಸಿದ್ದಾರೆ.
ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನು ಉಂಟು ಮಾಡಲಿರುವ ಯೋಜನೆಯ ಅನ್ವಯ ಭಾರತೀಯರಿಗೆ ಆರೋಗ್ಯ ಐಡಿ ಕಾರ್ಡ್ ನೀಡಲಾಗುವುದು. ಪ್ರತಿ ವ್ಯಕ್ತಿಯ ಹೆಸರಿನಲ್ಲಿ ಆರೋಗ್ಯ ಐಡಿ ಕಾರ್ಡ್ ಇರಲಿದ್ದು ಅವರಿಗೊಂದು ಆಧಾರ್ ಮಾದರಿ ಸಂಖ್ಯೆಯನ್ನು ನೀಡಲಾಗುವುದು.
ಆರೋಗ್ಯ ತಪಾಸಣೆಗೆ ಸಂಬಂಧಿಸಿದ ಮಾಹಿತಿ ಕಾರ್ಡ್ ನಲ್ಲಿ ಇರುತ್ತೆ. ವ್ಯಕ್ತಿ ಒಮ್ಮೆ ಆರೋಗ್ಯ ತಪಾಸಣೆಗೆ ಒಳಗಾಗಿ ನಂತರ ಆತನಿಗೆ ನೀಡುವ ಎಲ್ಲ ಚಿಕಿತ್ಸಾ ವಿಧಾನಗಳು, ಔಷಧ ಮಾಹಿತಿ ಮತ್ತು ಮುಂದೆ ನೀಡಬೇಕಿರುವ ಚಿಕಿತ್ಸೆ ಮಾಹಿತಿಯನ್ನು ಇದು ಒಳಗೊಂಡಿರುತ್ತದೆ.
ದೇಶದ ಜನರ ಆರೋಗ್ಯದ ದೃಷ್ಟಿಯಿಂದ ಇದೊಂದು ಮಹತ್ವದ ಯೋಜನೆಯಾಗಿದ್ದು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ. ತಂತ್ರಜ್ಞಾನ ಆಧಾರಿತ ಯೋಜನೆ ಇದಾಗಿದೆ. ಸಮಗ್ರ ಡಿಜಿಟಲ್ ಆರೋಗ್ಯ ಮಾನದಂಡಗಳನ್ನು ವಿಶ್ವದ ಮೊದಲ ದೇಶ ಭಾರತವಾಗಲಿದೆ. 2021ರ ಆರಂಭದ ವೇಳೆಗೆ ಭಾರತದಲ್ಲಿ ಡಿಜಿಟಲ್ ಹೆಲ್ತ್ ಕಾರ್ಡ್ ನೀಡಲಾಗುವುದು. ನಾಲ್ಕು ತಿಂಗಳೊಳಗೆ ಕಾರ್ಡುಗಳನ್ನು ತಲುಪಿಸಲಾಗುವುದು ಎಂದು ಹೇಳಲಾಗಿದೆ.