alex Certify ಕೊರೊನಾ ಕುರಿತ ಮುಂಬೈ ಪೊಲೀಸರ ಸಂದೇಶ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಕುರಿತ ಮುಂಬೈ ಪೊಲೀಸರ ಸಂದೇಶ ವೈರಲ್

ಉಳ್ಳವರು, ಉಳ್ಳದವರೆಂಬ ಬೇಧ ಮಾಡದೇ ಸಿಕ್ಕಸಿಕ್ಕವರನ್ನು ಬಲಿ ಪಡೆಯುತ್ತಿರುವ ನಾವೆಲ್ ಕೊರೊನಾ ವೈರಸ್‌ ಬಗ್ಗೆ ಜಾಗೃತರಾಗಿ ಇರಲು ಎಲ್ಲೆಡೆ ಆನ್ಲೈನ್ ಅಭಿಯಾನಗಳು ಚಾಲ್ತಿಯಲ್ಲಿವೆ.

ಸದಾ ಕ್ರಿಯಾಶೀಲ ಪೋಸ್ಟ್‌ಗಳೊಂದಿಗೆ ತನ್ನ ಟ್ವಿಟರ್‌ ಖಾತೆಯಲ್ಲಿ ಸದ್ದು ಮಾಡುವ ಮುಂಬೈ ಪೊಲೀಸ್, ಕೋವಿಡ್-19 ಬಗ್ಗೆ ಅರಿವು ಮೂಡಿಸುವ ಮತ್ತೊಂದು ಪೋಸ್ಟ್‌ ಮೂಲಕ ಸದ್ದು ಮಾಡುತ್ತಿದೆ. ಪೋಸ್ಟ್‌ನಲ್ಲಿ ಎರಡು ಕಾಯಿನ್‌ಗಳ ಚಿತ್ರವನ್ನು ತೋರಿರುವ ಮುಂಬೈ ಪೊಲೀಸ್, ’ಹೆಡ್ಸ್‌ ಬಿದ್ದಲ್ಲಿ ನೀವು ಗೆಲ್ಲುತ್ತೀರಿ, ಟೇಲ್ಸ್‌ ಬಿದ್ದಲ್ಲಿ ಕೊರೊನಾ ಸೋಲುತ್ತದೆ’ ಎಂಬ ಕ್ಯಾಚೀ ಕ್ಯಾಪ್ಷನ್ ಹಾಕಿದೆ.

ಈ ಕಾಯಿನ್‌ಗಳ ಮೇಲೆ ಮನೆಯೊಂದರ ಚಿತ್ರವಿದ್ದು, ಮತ್ತೊಂದರ ಮೇಲೆ ಮಾಸ್‌ ಧರಿಸಿರುವ ವ್ಯಕ್ತಿಯೊಬ್ಬರ ಚಿತ್ರವಿದೆ. ಎಚ್ಚರಿಕೆ ಹಾಗೂ ಸುರಕ್ಷತೆಗಳ ನೆರವಿನಿಂದ ಕೊರೊನಾದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು ಎಂಬ ಪರೋಕ್ಷ ಸಂದೇಶವನ್ನು ಮುಂಬೈ ಪೊಲೀಸರು ರವಾನೆ ಮಾಡಿದ್ದಾರೆ.

https://twitter.com/MumbaiPolice/status/1308993915144622081?ref_src=twsrc%5Etfw%7Ctwcamp%5Etweetembed%7Ctwterm%5E1308993915144622081%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fheads-you-win-tails-corona-loses-mumbai-polices-witty-two-cents-on-covid-19-goes-viral%2F657339

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...