65 ವರ್ಷದ ವ್ಯಕ್ತಿ ಎಷ್ಟು ದಿನ ಬದುಕಿದ್ದ ಎನ್ನುವುದನ್ನು ಕೇಳಿದರೆ, ಎಂತಹ ಗಣಿತ ತಜ್ಞನಾದರೂ ಕ್ಯಾಲ್ಕುಲೇಟರ್ ಕೇಳುತ್ತಾನೆ. ಆದರೆ ಇಲ್ಲೊಬ್ಬ ಶಾಲೆಗೆ ಹೋಗದ ಅವಿದ್ಯಾವಂತ ಸುಲಲಿತವಾಗಿ ಹೇಳುತ್ತಾನೆ.
ಹೌದು, ರಾಜಸ್ತಾನದ ದುದು ಎನ್ನುವ ಸ್ಥಳದಲ್ಲಿರುವ ಇರ್ಫಾನ್ ಎನ್ನುವ ವ್ಯಕ್ತಿ ಈ ರೀತಿ ಗಣಿತದ ಸೂಪರ್ ಮ್ಯಾನ್ ಆಗಿದ್ದಾರೆ. 65 ವರ್ಷದ ವ್ಯಕ್ತಿ ಎಷ್ಟು ದಿನ ಬದುಕಿರುತ್ತಾರೆ ಎನ್ನುವುದು ಮಾತ್ರವಲ್ಲದೇ, ಇದೇ ರೀತಿಯ ಹಲವು ಕಠಿಣ ಗಣಿತದ ಗುಣಿಸುವ ಕೆಲಸವನ್ನು ಫಟಾಫಟ್ ಎಂದು ಹೇಳುತ್ತಿರುವ ವಿಡಿಯೊ ವೈರಲ್ ಆಗಿದೆ.
ಈ ವಿಡಿಯೊ ಇದೀಗ ಭಾರಿ ವೈರಲ್ ಆಗಿದ್ದು, 23 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿ ಸಾವಿರಾರು ಮಂದಿ ಲೈಕ್ ಹಾಗೂ ಕಾಮೆಂಟ್ ಮಾಡಿದ್ದಾರೆ.