ಕೇರಳದಲ್ಲಿ ಹೊಸದಾಗಿ ಶಾಲೆ/ಕಾಲೇಜುಗಳಿಗೆ ದಾಖಲಾದ 1.24 ಲಕ್ಷ ವಿದ್ಯಾರ್ಥಿಗಳು ತಾವು ಯಾವುದೇ ಜಾತಿಗೆ ಸೇರಿದವರಲ್ಲ ಎಂದು ಅರ್ಜಿಯಲ್ಲಿ ಘೋಷಿಸಿಕೊಂಡಿದ್ದಾರೆ. ದಾಖಲಾತಿ ಸಂದರ್ಭದಲ್ಲಿ ತುಂಬಿಸುವ ಅರ್ಜಿಯಲ್ಲಿ ಈ ಮಕ್ಕಳು ಜಾತಿ ಹಾಗೂ ಧರ್ಮದ ಕಾಲಂಗಳನ್ನು ಖಾಲಿ ಬಿಟ್ಟಿದ್ದಾರೆ ಎಂದು ಕೇರಳ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.
ರಾಜ್ಯದ ವಾಮನಪುರಂ ಕ್ಷೇತ್ರದ CPM ಶಾಸಕ ಡಿ.ಕೆ. ಮುರಳಿ ಈ ಕುರಿತಾಗಿ ಸದನದಲ್ಲಿ ಮಾಹಿತಿ ಕೊಟ್ಟಿದ್ದಾರೆ. 1-10ನೇ ತರಗತಿ ನಡುವಿನ 1,23,630ರಷ್ಟು ಮಕ್ಕಳು ತಾವು ಯಾವುದೇ ಜಾತಿಗೆ ಸೇರಿದವರಲ್ಲ ಎಂದು ಹೇಳಿಕೊಂಡಿದ್ದರೆ, 11-12ನೇ ತರಗತಿಗೆ ದಾಖಲಾಗಿರುವ 517 ವಿದ್ಯಾರ್ಥಿಗಳು ತಮ್ಮನ್ನು ಯಾವುದೇ ಜಾತಿಯ ಮೂಲಕ ಗುರುತಿಸಿಕೊಂಡಿಲ್ಲ.
ರಾಜ್ಯಾದ್ಯಂತ ಇರುವ 9000+ ಶಾಲೆಗಳಿಂದ ಈ ಅಂಕಿಅಂಶಗಳನ್ನು ಸಂಗ್ರಹಿಸಲಾಗಿದೆ. ಈ ವಿಚಾರವಾಗಿ ಶಿಕ್ಷಣ ಸಚಿವರು ಇನ್ನೂ ಏನನ್ನೂ ಹೇಳಿಲ್ಲ.